ಸಂಸತ್ತಿನಲ್ಲಿ ನಡೆದ ವಿಶ್ವಾಸಮತ ಚರ್ಚೆಯ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಸಿಹಸಿ ಸುಳ್ಳು ಹೇಳಿರುವುದಾಗಿ ಎಡಪಕ್ಷಗಳು ಆರೋಪಿಸಿದ್ದು, ಪ್ರಧಾನಿ ಅವರ ಕಿರು ಮತ್ತು ನೀರಸ ಭಾಷಣವು ಅವರು ಮಂದ ವಿಶ್ವಾಸ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿವೆ.
ಲೋಕಸಭೆಯಲ್ಲಿ ವಿಶ್ವಾಸ ಗೊತ್ತುವಳಿ ಮಂಡನೆಯ ವೇಳೆಗಿನ ಪ್ರಧಾನಿ ಭಾಷಣವು ಸಾಮಾನ್ಯ ಕನಿಷ್ಠ ಅಂಶಗಳ ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ಏಕಪಕ್ಷೀಯತೆಯ ಮೇಲಿನ ಅವರ ವಿಶ್ವಾಸದ ಪುನರುಚ್ಛಾರವಾಗಿದೆ ಎಂದು ಹಿರಿಯ ಎಡಪಕ್ಷ ನಾಯಕರು ದೂರಿದ್ದಾರೆ.
ಪ್ರಧಾನಿ ಅವರ ಹೇಳಿಕೆಯು ಏಕಪಕ್ಷೀಯತೆಯಲ್ಲಿನ ತನ್ನ ನಂಬಿಕೆಯ ಪುನರುಚ್ಛಾರವಾಗಿದ್ದು, ಪಕ್ಷ ಮತ್ತು ವಿಷಯಗಳ ನಡುವೆ ಯಾವುದೇ ಒಪ್ಪಂದವಿಲ್ಲದೇ ಇರುವ ಸಂದರ್ಭದಲ್ಲಿ ಅಣು ಒಪ್ಪಂದದಲ್ಲಿ ಮುಂದುವರಿಯುವ ಮೂಲಕ, ಒಪ್ಪಂದದ ಉಲ್ಲಂಘನೆಯನ್ನು ಮಾಡಿದ್ದಾರೆ ಎಂದು ಸಿಪಿಐ(ಎಂ) ಹಿರಿಯ ನಾಯಕ ನಿಲೋತ್ಪಾಲ್ ಬಸು ಹೇಳಿದ್ದಾರೆ.
ಮಾರ್ಕಿಸ್ಟ್ ಜ್ಯೋತಿ ಬಸು ಮತ್ತು ಹರಿಕೃಷ್ಣನ್ ಸಿಂಗ್ ಸುರ್ಜೀತ್ ಸಮ್ಮಿಶ್ರ ಸರಕಾರದ ವಾಸ್ತುಶಿಲ್ಪಿಗಳು ಎಂಬ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್ಎಸ್‌ಪಿ ಪ್ರಧಾನ ಕಾರ್ಯದರ್ಶಿ ಟಿ.ಜೆ.ಚಂದ್ರಚೂಡನ್, ಅವರಿಗೆ ನೀಡಿರುವ ಆಶ್ವಾಸನೆಯನ್ನು ಉಲ್ಲಂಘಿಸಲಾಗಿದೆ ಎಂದರು. ಅಲ್ಲದೆ, ಏಕಪಕ್ಷೀಯ ಒಪ್ಪಂದದ ಮೂಲಕ ಅಲ್ಪಮತ ಸರಕಾರವು ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತು ಪ್ರಮುಖ ಮಾರ್ಕ್ಸಿಸ್ಟ್ ನಾಯಕರ ದೂರದರ್ಶಿತ್ವಕ್ಕೆ ಸಿಂಗ್ ಅವರು ವಿಶ್ವಾಸದ್ರೋಹವೆಸಗಿದ್ದಾರೆ ಎಂದೂ ಆರೋಪಿಸಿದರು.
ಪ್ರಧಾನಮಂತ್ರಿ ಅವರ ಭಾಷಣವು ಮತ್ತು ಸಂಕ್ಷಿಪ್ತ, ನೀರಸ ಮತ್ತು ವಂಚನೆಯ ನುಡಿಯಾಗಿದೆ ಎಂದು ಟೀಕಿಸಿರುವ ಅವರು, ಸಿಂಗ್ ಅವರ ಭಾಷಣದಲ್ಲಿ ಏನೇನೂ ಹುರುಳಿರಲಿಲ್ಲ, ಹೇಳಿದ ಸುಳ್ಳನ್ನೇ ಪುನರುಚ್ಛರಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಸಿಂಗ್ ಅವರ ಕಿರು ಭಾಷಣವು ಅವರ ಮಂದ ವಿಶ್ವಾಸ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಫಾರ್ವರ್ಡ್ ಬ್ಲಾಕ್ ಕಾರ್ಯದರ್ಶಿ ಜಿ.ದೇವರಾಜನ್ ಹೇಳಿದ್ದು, ಸಂಸತ್ತಿನಲ್ಲಿಯೂ ಸಿಂಗ್ ಅವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.
|