ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಡಿಎ ಕತ್ತಲೆಕೋಣೆಯಲ್ಲಿ ನಿಷ್ಕ್ರಿಯವಾಗಿದೆ: ಮೊಯಿಲಿ  Search similar articles
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ವಿಶ್ವಾಸದಮತದ ಕುರಿತಂತೆ, ಎನ್‌ಡಿಎ ಮೈತ್ರಿಕೂಟವು ಕತ್ತಲೆಯ ಕೋಣೆಯಲ್ಲಿ ನಿಷ್ಕ್ರಿಯತೆಯಿಂದಿರುವುದಾಗಿ ವ್ಯಂಗ್ಯವಾಡಿರುವ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ, 280+ ಸಂಸದರ ಬೆಂಬಲದೊಂದಿಗೆ ವಿಶ್ವಾಸಮತ ಗೊತ್ತುವಳಿಯಲ್ಲಿ ಸರಕಾರ ಗೆಲುವು ಸಾಧಿಸಲಿದೆ ಎಂದು ಒತ್ತಿ ಹೇಳಿದೆ.

ವಿರೋಧ ಪಕ್ಷದ ನಾಯಕರ ನಡುವೆ ಯಾವುದೇ ವಿಶ್ವಾಸ ಮತ್ತು ಉತ್ಸುಕತೆಯು ತನಗೆ ಕಂಡುಬಂದಿಲ್ಲ ಎಂದು ಎಐಸಿಸಿ ಮೀಡಿಯಾ ಸೆಲ್ ಅಧ್ಯಕ್ಷ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಯುಪಿಎ ಸರಕಾರವು ಅಲ್ಪಮತವನ್ನು ಎಂದಿಗೂ ಹೊಂದಿಲ್ಲ. ಎಡಪಕ್ಷಗಳು ಬೆಂಬಲವನ್ನು ಹಿಂತೆಗೆದುಕೊಂಡ ನಂತರವೂ, 276 ಸದಸ್ಯಬಲವನ್ನು ಯುಪಿಎ ಸರಕಾರವು ಹೊಂದಿದೆ. ಯುಪಿಎ ಸರಕಾರವು 280ಕ್ಕಿಂತ ಹೆಚ್ಚಿನ ಸದಸ್ಯಬಲವನ್ನು ಹೊಂದಿರುವುದಾಗಿ ವಿಶ್ವಾಸದಿಂದ ನುಡಿಯಬಲ್ಲೆ ಎಂದು ಮೊಯ್ಲಿ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯುಪಿಎ ಸರಕಾರದ ಮೇಲಿನ ಎಡಪಕ್ಷಗಳ ಆಕ್ರೋಶವು ಕೇವಲ ನಿರಾಶೆಯನ್ನು ತೋರಿಸುತ್ತದೆ. ಯುಪಿಎಯನ್ನು ಸೋಲಿಸಲು ಎಡಪಕ್ಷಗಳು ನಡೆಸಿದ ಸಾಹಸವು ವಿಫಲವಾಗಲಿದೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು.

ಈ ನಡುವೆ, ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಸೂಚಿಸಿರುವ ಎಡಪಕ್ಷಗಳ ನಿಲುವನ್ನು ಟೀಕಿಸಿದ ಅವರು, ವಿದೇಶಿ ನೀತಿಗಳ ಬಗ್ಗೆ ಮಾಯಾವತಿ ಇನ್ನಷ್ಟೇ ಕಲಿತುಕೊಳ್ಳಬೇಕಾಗಿದೆ ಎಂದು ನುಡಿದರು.

ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಅಮೆರಿಕವು ಇರಾನ್ ಮೇಲೆ ಆಕ್ರಮಣ ಮಾಡುತ್ತದೆ ಎಂಬ ಮಾಯಾವತಿಯವರ ಹೇಳಿಕೆಯ ಅಸಂಬದ್ಧ ಎಂದ ಅವರು, ತೀವ್ರ ಭೃಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಬಿಎಸ್‌ಪಿ ಪಕ್ಷವನ್ನು ಎಡಪಕ್ಷಗಳು ಹೇಗೆ ಬೆಂಬಲಿಸುತ್ತವೆ ಎಂಬುದಾಗಿ ತನಗೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.

ಲೋಕಸಭೆಯ ಸ್ಪೀಕರ್ ಸೋಮನಾಥ ಚಟರ್ಜಿ ಅವರು ರಾಜೀನಾಮೆ ನೀಡಬೇಕೆಂಬ ಸಿಪಿಎಂನ ಆಗ್ರಹದ ವಿರುದ್ಧ ಕಿಡಿಕಾರಿದ ಮೊಯಿಲಿ, ಎಡಪಕ್ಷಗಳು ಪ್ರಜಾಪ್ರಭುತ್ವದ ಸಂವಿಧಾನ ಮತ್ತು ಮೂಲಭೂತ ತತ್ವಗಳನ್ನು ಇನ್ನೂ ಅರ್ಥೈಸಿಕೊಂಡಿಲ್ಲ ಎಂದು ಟೀಕಿಸಿದರು.
ಮತ್ತಷ್ಟು
ಪ್ರಧಾನಿಯಿಂದ ಹಸಿಹಸಿ ಸುಳ್ಳು: ಎಡಪಕ್ಷಗಳ ಆರೋಪ
ವಿಶ್ವಾಸಮತ ಸಾಬೀತುಪಡಿಸಲಿದ್ದೇವೆ: ಪ್ರಣಬ್
ಮತಕ್ಕಾಗಿ ಅಮೆರಿಕದಿಂದ ಮರಳಿದ ಸಂಸದ ಧರ್ಮೇಂದ್ರ
ಪೋಖ್ರನ್-II ಟೀಕಿಸಿರಲಿಲ್ಲ: ಮನಮೋಹನ್ ಸಿಂಗ್
ಅಣುಒಪ್ಪಂದ ರದ್ದುಗೊಳಿಸಿ: ಮಾಯಾವತಿ ಆಗ್ರಹ
ಅಣುಬಂಧಕ್ಕೆ ವಿರೋಧವಿಲ್ಲ, ಮರುವಿಮರ್ಶೆಯಾಗಲಿ: ಆಡ್ವಾಣಿ