ಅಣು ಒಪ್ಪಂದದ ಹಗ್ಗಜಗ್ಗಾಟದಲ್ಲಿ ಸಂಸತ್‌ನಲ್ಲಿ ಯುಪಿಎ ವಿಶ್ವಾಸಮತ ಸಾಬೀತುಪಡಿಸುವ ಮುನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಎಡಪಕ್ಷಗಳು ಇದೀಗ ಸ್ಪೀಕರ್ ಸೋಮನಾಥ್ ಚಟರ್ಜಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರು ಎನ್‌ಡಿ ಟಿವಿಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸ್ಪೀಕರ್ ಸೋಮನಾಥ್ ಚಟರ್ಜಿ ಅವರ ನಡವಳಿಕೆ ಬಗ್ಗೆ ಪೊಲಿಟ್ ಬ್ಯೂರೋದಲ್ಲಿ ಚರ್ಚೆ ನಡೆಸಿ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಯೆಚೂರಿ ಸೂಚನೆ ನೀಡಿದ್ದಾರೆ.
ವಿಶ್ವಾಸಮತ ಯಾಚನೆಯ ಮುನ್ನವೇ ಚಟರ್ಜಿ ಅವರು ತಮ್ಮ ಸ್ಥಾನವನ್ನು ತೊರೆಯಬೇಕು ಎಂದು ಎಡಪಕ್ಷಗಳು ಸಾಕಷ್ಟು ಒತ್ತಡ ಹೇರಿತ್ತಾದರೂ ಕೂಡ, ಚಟರ್ಜಿ ಅವರು ತಾನು ಸ್ಥಾನ ತ್ಯಜಿಸಲಾರೆ ಎಂದು ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರಿಗೆ ದೀರ್ಘವಾದ ಪತ್ರವೊಂದನ್ನು ಬರೆದಿದ್ದರು.
|