ವಿಶ್ವಾಸ ಮತ ಯಾಚನೆಯು ಕೇವಲ ಭಾರತ - ಅಮೆರಿಕ ಅಣು ಒಪ್ಪಂದಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಯುಪಿಎಯ 50 ತಿಂಗಳ ಆಡಳಿತದ ಅಳತೆಗೋಲು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಅವರು ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿ ಮಾತನಾಡುತ್ತಿದ್ದರು.
ತಮ್ಮ ಸರಕಾರ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೆ ಆಡಳಿತ ನಡೆಸಿದೆ ಪ್ರಸಕ್ತ ಆಣು ಒಪ್ಪಂದವು ಇದಕ್ಕೆ ಹೊರತಾಗಿಲ್ಲ ಎಂದವರು ತಿಳಿಸಿದ್ದಾರೆ. ಸದನವು ಮಂತ್ರಿ ಮಂಡಳಿಯ ಮೇಲೆ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಲಿದೆ ಎಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
|