ನವದೆಹಲಿ: ಸೋಮನಾಥ ಚಟರ್ಜಿ ತಮ್ಮ ಲೋಕಸಭಾ ಸ್ಪಿಕರ್ ಸ್ಥಾನಕ್ಕೆ ರಾಜಿನಾಮೆ ನೀಡದ್ದು ಸಿಪಿಎಂನ ಕೆಂಗಣ್ಣಿಗೆ ಕಾರಣವಾಗಿದ್ದು ಅವರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವ ಮುನ್ಸೂಚನೆ ದೊರಕಿದೆ.
ಈ ವಿಷಯವನ್ನು ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಾದ ಪಾಲಿಟ್ ಬ್ಯೂರೊದ ಗಮನಕ್ಕೆ ತರಲಾಗುವುದು ಎಂದು ಪಕ್ಷದ ನಾಯಕ ಸಿತಾರಾಂ ಯೆಚೂರಿ ತಿಳಿಸಿದ್ದಾರೆ.
ಸರಕಾರ ವಿಶ್ವಾಸಮತ ಯಾಚಿಸುವ ಮುಂಚಿತವಾಗಿ ಚಟರ್ಜಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬಹುದೆಂದು ಸಿಪಿಯಂ ನಿರೀಕ್ಷಿಸಿತ್ತು.
|