ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಯುಪಿಎ 'ಹಣೆಬರಹ' ನಿರ್ಧಾರ  Search similar articles
ವಿಶ್ವಾಸಮತ ಯಾಚಿಸುವ ಕಾಲವು ಕೊನೆಗೂ ದಿನ ಕೂಡಿ ಬಂದಿದ್ದು, ಇಂದು ಸಂಜೆಯೊಳಗೆ ಮನಮೋಹನ್ ಸಿಂಗ್ ಸರಕಾರದ ಹಣೆಬರಹವು ದೇಶದ ಜನತೆಗೆ ತಿಳಿಯಲಿದೆ.

ಸರಕಾರದ ಭವಿಷ್ಯ ನಿರ್ಧಾರವಾಗುವ ದಿನ ಸಮೀಪಿಸುತ್ತಿದ್ದಂತೆಯೇ, ತಾನು ವಿಶ್ವಾಸಮತದಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಸರಕಾರವು ವಿಶ್ವಾಸದಿಂದಲೇ ನುಡಿಯುತ್ತಿದೆ. ಸದ್ಯಕ್ಕೆ, ಸರಕಾರವು ವಿರೋಧ ಪಕ್ಷದ ವಿರುದ್ಧ ಕೇವಲ ಕೂದಲೆಳೆಯ ಅಂತರವನ್ನು ಹೊಂದಿದೆ ಎಂಬುದಾಗಿ ತಿಳಿದುಬಂದಿದೆ.

'ನಾವು 272 ಸದಸ್ಯಬಲವನ್ನು ಹೊಂದಿದ್ದೇವೆ' ಎಂದು ಯುಪಿಎ ಸರಕಾರವು ಹೇಳಿಕೊಳ್ಳುತ್ತಿದ್ದು, ಇದು ಸಂಸತ್ತಿನ ಅರ್ಧದಷ್ಟು ಅಂದರೆ 271 ಸಂಖ್ಯಾಬಲಕ್ಕಿಂತ ಒಂದು ಸ್ಥಾನ ಹೆಚ್ಚಿದೆ. ಆದರೆ, ಕೆಲವು ಸಂಸದರ ಗೈರುಹಾಜರಿಯ ಕಾರಣಗಳಿಂದ ಈ ಅಂತರವು ಕಡಿಮೆಗೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಜೆಡಿಎಸ್ ಮುಖ್ಯಸ್ಥ ದೇವೇಗೌಡ ಮತ್ತು ಆರ್ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಅವರ ನಿರ್ಧಾರದಲ್ಲಿನ ಸಂಭಾವ್ಯ ಬದಲಾವಣೆಯು ಸರಕಾರಕ್ಕೆ ಅದೃಷ್ಟ ಖುಲಾಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಿರೋಧಪಕ್ಷವು ಸಾಕಷ್ಟು ಸಂಖ್ಯಾಬಲವನ್ನು ಹೊಂದಿಲ್ಲ ,ವಿಶ್ವಾಸಮತ ಯಾಚನೆಯ ವೇಳೆ ಏನು ಬೇಕಾದರೂ ಆಗಬಹುದು ಎಂಬುದಾಗಿ ಈ ಎರಡೂ ನಾಯಕರು ಸೋಮವಾರ ಹೇಳಿದ್ದರು. ಸೋನಿಯಾ ಗಾಂಧಿ ಅವರನ್ನು ದೇವೇಗೌಡ ಮತ್ತು ಅಜಿತ್ ಸಿಂಗ್ ಇಂದು ಭೇಟಿಯಾಗುವ ಸಾಧ್ಯತೆಯಿದೆ ಎಂಬ ವರದಿಗಳೂ ಇವೆ.

ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮತ್ತು ನ್ಯಾಶನಲ್ ಫ್ರಂಟ್‌ನ ಸಂಸದ ವನಲಾಲ್‌ಜಾವ್ಮಾ ಅವರು ವಿಶ್ವಾಸಮತದಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದರೂ, ಅಡ್ಡಮತದಾನ ಹಾಗೂ ಗೈರುಹಾಜರು ಇಳಿಕೆಗೆ ಸರಕಾರವು ಪ್ರಯತ್ನಿಸುತ್ತಲೇ ಇದೆ.

ಈ ನಡುವೆ, ಬಿಜು ಜನತಾದಳದ ಐದು ಸಂಸದರು ಯುಪಿಎಗೆ ಮತಹಾಕಲಿದ್ದಾರೆ ಎಂಬ ಹೇಳಿಕೆಗಳು ವ್ಯಕ್ತವಾಗಿವೆ. ಆದರೆ, ಸರಕಾರ ಉರುಳಿಸುವಲ್ಲಿನ ಯುಎನ್‌ಪಿಎ ಎಡಪಕ್ಷಗಳ ಪ್ರಯತ್ನದಲ್ಲಿ ಕೇಂದ್ರಬಿಂದುವಾಗಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ,ಸರಕಾರವು ಖಂಡಿತವಾಗಿಯೂ ಉರುಳುತ್ತದೆ ಎಂದು ಹೇಳುತ್ತಲೇ ಇದ್ದಾರೆ.

ಒಟ್ಟಾರೆ, ಇಂದಿನ ವಿಶ್ವಾಸಮತವು ದೇಶದ ಜನತೆಯಲ್ಲಿ ಅತ್ಯಂತ ಕುತೂಹಲವನ್ನು ಮೂಡಿಸಿದ್ದು, ಗೆಲುವು ಯಾರ ಪರವಾಗಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಮತ್ತಷ್ಟು
ಚಟರ್ಜಿ ವಿರುದ್ಧ ಶಿಸ್ತು ಕ್ರಮ?
ವಿಶ್ವಾಸ ಮತ ಆಡಳಿತದ ಅಳತೆಗೋಲು: ಪ್ರಧಾನಿ
ಚಟರ್ಜಿ ವಿರುದ್ಧ ಕ್ರಮ: ಯೆಚೂರಿ
ವಿಶ್ವಾಸಮತದಿಂದ ತೃಣಮೂಲ ಕಾಂಗ್ರೆಸ್ ದೂರ
ಎನ್‌ಡಿಎ ಕತ್ತಲೆಕೋಣೆಯಲ್ಲಿ ನಿಷ್ಕ್ರಿಯವಾಗಿದೆ: ಮೊಯಿಲಿ
ಪ್ರಧಾನಿಯಿಂದ ಹಸಿಹಸಿ ಸುಳ್ಳು: ಎಡಪಕ್ಷಗಳ ಆರೋಪ