ಜಾಗತಿಕ ಕುತೂಹಲ ಕೆರಳಿಸಿರುವ ಯುಪಿಎ ಸರಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯು ಮಂಗಳವಾರ ಮುಂಜಾನೆ 11ಗಂಟೆಗೆ ಆರಂಭವಾಗಲಿದೆ. ಸದನದ ಕಲಾಪ ಆರಂಭವಾಗುತ್ತಲೇ ಚರ್ಚೆ ಮುಂದುವರಿಯಲಿದೆ.
*ಅಸೌಖ್ಯ ಸಂಸದರು, ಸ್ಟ್ರೆಚರ್‌ಗಳು ಮತ್ತು ಗಾಲಿ ಕುರ್ಚಿಗಳಲ್ಲಿ ಸದನಕ್ಕೆ ಆಗಮಿಸಲಿದ್ದಾರೆ.
*ರಾಹುಲ್ ಗಾಂಧಿ ಇಂದು ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯೊಳಗೆ ಅವರು ಮಾತನಾಡುವ ನಿರೀಕ್ಷೆ.
*ಪ್ರಧಾನಿ ಅವರ ಉತ್ತರ ಸಂಜೆ 4.30ಕ್ಕೆ ಆರಂಭವಾಗಲಿದ್ದು, ಕನಿಷ್ಠ ಒಂದು ಗಂಟೆ ಮುಂದುವರಿಯಲಿದೆ.
*ವಿಶ್ವಾಸ ಮತದಾನವು ಆರು ಗಂಟೆಗೆ ಆರಂಭ.
ವಿಶ್ವಾಸ ಮತದಾನದ ಪ್ರಕ್ರಿಯೆ *ಪ್ರತಿ ಸಂಸದರಿಗೆ ಒಂದೊಂದು ಸ್ಥಾನವನ್ನು ಮಂಜೂರು ಮಾಡಲಾಗುವುದು. ಪ್ರತೀ ಸೀಟಿನಲ್ಲೂ ಮತದಾನ ಆರಂಭದ ಗುಂಡಿ ಮತ್ತು ನಾಲ್ಕು ಒತ್ತು ಗುಂಡಿಗಳಿರುತ್ತವೆ.
*ಹಸಿರು ಗುಂಡಿ 'ಹೌದು' ಎಂಬ ಸೂಚನೆಯನ್ನು, ಕೆಂಪು ಗುಂಡಿ 'ಇಲ್ಲ' ಎಂಬ ಸೂಚನೆಯನ್ನು, ಹಳದಿ ಗುಂಡಿ ಮತದಾನಕ್ಕೆ ನಕಾರ ಹಾಗೂ ಕಿತ್ತಳೆ ಬಣ್ಣದ ಗುಂಡಿ ಹಾಜರಿಯನ್ನು ಸೂಚಿಸುತ್ತದೆ.
*ಮತದಾನದ ಗಂಟೆ ಮೊಳಗಿದ ತಕ್ಷಣ ಸಂಸದರು ಆರಂಭದ ಗುಂಡಿ ಅದುಮಿ ಬಳಿಕ ಮತದಾನದ ಕುರಿತ ತನ್ನಆಯ್ಕೆಯ ಗುಂಡಿಯನ್ನು ಅದುಮಬೇಕು. ಮತ್ತೊಮ್ಮೆ ಗಂಟೆ ಮೊಳಗುವ ತನಕ ಮತದಾರರು ಕನಿಷ್ಠ ಹತ್ತು ಸೆಕುಂಡುಗಳ ಗುಂಡಿಯನ್ನು ಒತ್ತಿಹಿಡಿಯಬೇಕು. ಒಂದೊಮ್ಮೆ ತಪ್ಪು ಗುಂಡಿ ಅದುಮಿದಲ್ಲಿ ಗಂಟೆ ಮೊಳಗುವ ಮುನ್ನ ಸರಿ ಗುಂಡಿ ಅದುಮುವ ಅವಕಾಶವಿದೆ.
ಪ್ರತೀ ಸ್ಥಾನದ ಫಲಿತಾಂಶ ಪ್ರದರ್ಶನಗೊಳ್ಳಲಿದೆ. ತಪ್ಪುಗಳನ್ನು ಕರೆಕ್ಷನ್ ಸ್ಲಿಪ್‌ಗಳ ಮೂಲಕ ಸರಿಪಡಿಸಬಹುದಾಗಿದೆ.
|