ಸೇತುಸಮುದ್ರಂ ಯೋಜನೆಯನ್ನು ಸರಕಾರವು ಮುಂದುವರಿಸುವುದಾಗಿ ಕೇಂದ್ರ ಸರಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸೂಚನೆ ನೀಡುವ ನಿರೀಕ್ಷೆ ಇದೆ.
ಸಂಸತ್ತಿನಲ್ಲಿ ಇಂದು ನಡೆಯಲಿರುವ ವಿಶ್ವಾಸಮತ ಯಾಚನೆಯ ಮುಂದಾಗಿ, ಯುಪಿಎ ಸರಕಾರದ ಯೋಜನೆಯ ಕುರಿತಾದ ಈ ನಿಲುವು ಡಿಎಂಕೆ ಪಕ್ಷಕ್ಕೆ ಉಡುಗೊರೆ ನೀಡಿದಂತಾಗಿದೆ. ಈ ಯೋಜನೆಯನ್ನು ಮುಂದುವರಿಸಲು ಪಕ್ಷವು ಕೇಂದ್ರಕ್ಕೆ ಒತ್ತಡ ಹೇರುತ್ತಿತ್ತು
ಈ ಯೋಜನೆಯನ್ನು ಮುಂದುವರಿಸಲು ಅನುಮತಿ ನೀಡುವಂತೆ ಕೇಂದ್ರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿದವಿತ್ ಸಲ್ಲಿಸಲಿರುವುದಾಗಿ ಮೂಲಗಳು ತಿಳಿಸಿದ್ದು, ಯೋಜನೆಯನ್ನು ಪ್ರಾರಂಭಿಸುವ ಮೊದಲು ಎಎಸ್ಐ ಸಮೀಕ್ಷೆ ನಡೆಸುವ ಅಗತ್ಯವಿಲ್ಲ ಎಂಬುದಾಗಿಯೂ ನ್ಯಾಯಾಲಯಕ್ಕೆ ತಿಳಿಸುವ ನಿರೀಕ್ಷೆ ಇದೆ.
ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯು ಒಮ್ಮೆ ಪೂರ್ಣಗೊಂಡಲ್ಲಿ, ಭಾರತದ ಪಶ್ಚಿಮ ಕರಾವಳಿಯಿಂದ, ಭಾರತದ ಪೂರ್ವಕರಾವಳಿಗೆ ಶ್ರೀಲಂಕಾ ಮೂಲಕ ತಲುಪುವ ಬದಲು, ಪಾಕಿಸ್ತಾನ ಕೊಲ್ಲಿಯ ಮೂಲಕ ತಲುಪಲು ಇದು ಅನುವು ಮಾಡಿಕೊಡಲಿದೆ. ಇದು ಸುಮಾರು 424 ನಾವಿಕ ಮೈಲಿಯನ್ನು ಉಳಿಸುವುದರೊಂದಿಗೆ, 30 ಗಂಟೆಗಳ ಹಡಗು ಪ್ರಯಾಣ ಸಮಯವನ್ನೂ ಉಳಿಸುತ್ತದೆ.
ಜುಲೈ 2004ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಸೇತುಸಮುದ್ರಂ ಕಾಲುವೆಯು ರಾಮಾಯಣದ ಕಾಲದಲ್ಲಿ ಭಗವಾನ್ ಶ್ರೀರಾಮನಿಂದ ನಿರ್ಮಿತಗೊಂಡ ಕಾಲುವೆ ಎಂದು ಹೇಳುವ ಮೂಲಕ ಹಿಂದೂ ಪ್ರತಿಭಟನೆಗಾರರು ಈ ಯೋಜನೆಯನ್ನು ಮುಂದುವರಿಸಲು ಅಡ್ಡಿಪಡಿಸಿದ್ದರು. ಇದರೊಂದಿಗೆ, ಪರಿಸರವಾದಿಗಳು ಕೂಡಾ ಇದನ್ನು ವಿರೋಧಿಸುತ್ತಿದ್ದರು.
|