ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಡ್ ಕಾಯಿದೆ ಭಾರತಕ್ಕೆ ಅನ್ವಯಿಸುವುದಿಲ್ಲ: ಚಿದಂಬರಂ  Search similar articles
ವಿಶ್ವಾಸಮತದ ಮುಂದಾಗಿ ಸಂಸತ್ತಿನ ಎರಡನೇ ದಿನ ಅಧಿವೇಶನವು ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರ ಭಾಷಣದೊಂದಿಗೆ ಪ್ರಾರಂಭಗೊಂಡಿತು.

ಹೈಡ್ ಕಾಯಿದೆಯು ಭಾರತಕ್ಕೆ ಅನ್ವಯವಾಗುವುದಿಲ್ಲ ಅಥವಾ ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದೂ ಇಲ್ಲ ಎಂದು ನುಡಿದರು. ಸರಕಾರವು ಅಮೆರಿಕದೊಂದಿಗೆ ಅಣು ಒಪ್ಪಂದದಲ್ಲಿ ಹೇಗೆ ಮುಂದುವರಿದಿದೆ ಎಂಬುದರ ಬಗ್ಗೆ ಲೋಕಸಭೆಯಲ್ಲಿ ಚಿದಂಬರಂ ವಿವರಣೆ ನೀಡಿದರು.

ಈ ನಡುವೆ, ಯುಪಿಎ ಸರಕಾರದ ಸಾಧನೆಗಳನ್ನು ವಿವರಪಡಿಸಿದ ಅವರು, ಭಾರತದ ಆರ್ಥಿಕತೆಯು ಶೇ.ಏಳರಿಂದ ಶೇ.ಎಂಟಕ್ಕೆ ಏರಿಕೆಗೊಂಡಿರುವುದಾಗಿ ತಿಳಿಸಿದರು. ಅಲ್ಲದೆ, 2008ರಲ್ಲಿ ಇದು ಶೇ.9.1ಕ್ಕೆ ಏರಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಆರ್ಥಿಕ ಸುಧಾರಣೆಗಳು ದೇಶದ ರೈತರ ಅಗತ್ಯತೆಗಳನ್ನು ಪರಿಗಣಿಸಿವೆ ಎಂಬುದಾಗಿ ಸ್ಪಷ್ಟಪಡಿಸಿದರು.

ಅಲ್ಲದೆ, ಇದು ವರೆಗೆ ಯಾವ ಸರಕಾರವೂ ಮಾಡದಿರದ ರೈತರ ಸಾಲಮನ್ನಾದಂತಹ ಬೃಹತ್ ಯೋಜನೆಯನ್ನು ಯುಪಿಎ ಸರಕಾರ ಜಾರಿಗೆ ತಂದಿದೆ ಎಂದು ಅವರು ನುಡಿದರು.

ಇಂತಹ ಕಷ್ಟಕರ ವರ್ಷದಲ್ಲಿಯೂ, ಕಳೆದ ಆರು ವರ್ಷಗಳಲ್ಲಿ ಎನ್‌ಡಿಎ ಸರಕಾರ ಸಾಧನೆ ಮಾಡಿರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಯುಪಿಎ ಸರಕಾರವು ಸಾಧಿಸಲಿದೆ ಎಂದು ಹಣಕಾಸು ಸಚಿವರು ಇದೇ ವೇಳೆ ನುಡಿದರು.
ಮತ್ತಷ್ಟು
ರಾಮಸೇತು: ಇಂದು ಸು.ಕೋ.ಗೆ ಮನವಿ ಸಾಧ್ಯತೆ
ಲೋಕಸಭೆಯೊಳಗಿಂದು ಏನೇನು ನಡೆಯಲಿದೆ?
'ಹಗ್ಗಜಗ್ಗಾಟ'ದ ಗೆಲುವಿನ ವಿಶ್ವಾಸದಲ್ಲಿ ಯುಪಿಎ
ಇಂದು ಯುಪಿಎ 'ಹಣೆಬರಹ' ನಿರ್ಧಾರ
ಚಟರ್ಜಿ ವಿರುದ್ಧ ಶಿಸ್ತು ಕ್ರಮ?
ವಿಶ್ವಾಸ ಮತ ಆಡಳಿತದ ಅಳತೆಗೋಲು: ಪ್ರಧಾನಿ