ಸಂಸತ್ತಿನಲ್ಲಿ ಸರಕಾರವು ವಿಶ್ವಾಸಮತ ಯಾಚಿಸುವ ಕಾರಣದಿಂದ ಸೇತುಸಮುದ್ರಂ ಯೋಜನೆಯ ವಿಚಾರಣೆಯನ್ನು ಮುಂದೂಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ವಿಶ್ವಾಸ ಗೊತ್ತುವಳಿಗೆ ನ್ಯಾಯಾಲಯವು ಹೇಗೆ ಸಂಬಂಧಪಟ್ಟಿದೆ?ಇದು ಕೇವಲ ನ್ಯಾಯಾಂಗ ವಿಚಾರಗಳಿಗೆ ಮಾತ್ರವೇ ಸಂಬಂಧಪಟ್ಟಿದೆ ಎಂದು ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು ಹೇಳಿದ್ದು, ವಿಶ್ವಾಸ ಗೊತ್ತುವಳಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಬೇಕೆಂಬ ಪಿರ್ಯಾದಿಯ ಮನವಿಯನ್ನು ತಿರಸ್ಕರಿಸಿದೆ.
ದೇಶದಲ್ಲಿ ಅನೇಕ ಘಟನೆಗಳು ನಡೆಯುತ್ತಿದ್ದು, ನ್ಯಾಯಾಲಯವು ಕೇವಲ ಈ ದೂರಿನ ಬಗ್ಗೆ ಸಂಬಂಧಪಟ್ಟಿದೆ ಎಂದು ನ್ಯಾಯಾಧೀಶ ಆರ್.ವಿ.ರವಿಚಂದ್ರನ್ ಮತ್ತು ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠವು ಸ್ಪಷ್ಟಪಡಿಸಿದೆ.
|