ತನ್ನ ಪತ್ನಿಯ ಆಸ್ತಿಯನ್ನು ಕಬಳಿಸಲು ಬೆಂಗಳೂರಿನ ತನ್ನ ನಿವಾಸದಲ್ಲಿ ಆಕೆಯನ್ನು ಜೀವಂತ ಹೂತು ಹಾಕಿರುವ ಸ್ವಯಂಘೋಷಿತ 'ಸ್ವಾಮಿ' ಶೃದ್ಧಾನಂದಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್, ಜಿ.ಎಸ್.ಸಿಂಗ್ ಮತ್ತು ಅಫ್ತಬ್ ಅಲಾಂ ಅವರನ್ನೊಳಗೊಂಡ ನ್ಯಾಯಪೀಠವು, ಶೃದ್ಧಾನಂದ ತನ್ನ ಜೀವನವನ್ನು ಜೈಲಿನಲ್ಲಿಯೇ ಕಳೆಯಬೇಕೆಂಬ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಮತ್ತು ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ಪೀಠವು ಕಳೆದ ವರ್ಷ ಮೇ ತಿಂಗಳಲ್ಲಿ ಪ್ರತ್ಯೇಕ ತೀರ್ಪನ್ನು ನೀಡಿದ ನಂತರ, ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠವು ಶಿಕ್ಷೆಯ ಪ್ರಮಾಣದ ತನ್ನ ತೀರ್ಪನ್ನು ಘೋಷಿಸಿದೆ.
ಇದು ಮರಣದಂಡನೆ ಶಿಕ್ಷೆಯನ್ನು ನೀಡಬೇಕಾದಂತಹ ಅಪರಾಧವಾಗಿದೆ ಎಂದು ನ್ಯಾಯಮೂರ್ತಿ ಕಾಟ್ಜು ಅವರು ಹೇಳಿದ್ದರೂ, ನ್ಯಾಯಮೂರ್ತಿ ಸಿನ್ಹಾ ಜೀವಾವಧಿ ಶಿಕ್ಷೆಯ ತೀರ್ಪನ್ನು ನೀಡಿದ್ದರು.
ಈ ಎರಡು ಪ್ರತ್ಯೇಕ ತೀರ್ಪುಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರು ಇದನ್ನು ದೊಡ್ಡಪೀಠಕ್ಕೆ ವಹಿಸಿದ್ದರು.
|