ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಟು ಪ್ರದರ್ಶನ: ಪ್ರಜಾಸತ್ತೆಯ ಕರಾಳ ಅಧ್ಯಾಯ  Search similar articles
ಮತದಾನದ ವೇಳೆ ತಟಸ್ಥವಾಗಿರುವಂತೆ ತಮಗೆ ಮೂರು ಕೋಟಿ ರೂಪಾಯಿ ನೀಡಲಾಗಿದೆ ಎಂದು ಆರೋಪಿಸಿದ ಬಿಜೆಪಿ ಸಂಸದರು ನೋಟಿನ ಕಂತೆಗಳನ್ನು ಲೋಕಸಭೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಪ್ರಜಾಸತ್ತೆಯಲ್ಲಿ ಹಿಂದೆಂದೂ ಇಲ್ಲದಂತಹ ಕರಾಳ ಅಧ್ಯಾಯ ಒಂದು ದಾಖಲಾಯಿತು.

ವಿಶ್ವಾಸಮತ ಗೊತ್ತುವಳಿಯ ಚರ್ಚೆಯ ವೇಳೆಗೆ ಲೋಕಸಭೆಯಲ್ಲಿ ನಾಟಕೀಯ ತಿರುವು ಪಡೆದಿದ್ದು, ಸರಕಾರದ ವಿರುದ್ಧ ಮತಚಲಾಯಿಸದಿರುವಂತೆ ತಮಗೆ ಸಮಾಜವಾದಿ ಪಕ್ಷವು ಮೂರು ಕೋಟಿ ಲಂಚ ನೀಡಿದೆ ಎಂದು ಮೂವರು ಬಿಜೆಪಿ ಸಂಸದರು ಆರೋಪಿಸಿದ್ದು, ಸದನದಲ್ಲಿ ಕೋಲಾಹಲ ಉಂಟಾಯಿತು.

ರಾಜಸ್ಥಾನದ ಸಂಸದ ಮಹಾವೀರ್ ಬಗೋರ, ಮಧ್ಯಪ್ರದೇಶದ ಅಶೋಕ್ ಅರ್ಗಲ್, ಫರ್ಗನ್ ಸಿಂಗ್ ಕುಲಸ್ತೆ ಎಂಬ ಮೂವರು ಬಿಜೆಪಿ ಸಂಸದರಿಗೆ ನೀಡಲಾಗಿದೆ ಎಂದು ಹೇಳಲಾದ ಹಣದ ಕಂತೆಕಂತೆಗಳನ್ನು ಮತ್ತೆಮತ್ತೆ ಪ್ರದರ್ಶಿಸಿದರು.

ಈ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆಡ್ವಾಣಿ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸದಸ್ಯರ ವರ್ತನೆಯನ್ನು ಖಂಡಿಸಿದ ಲಾಲೂ ಪ್ರಸಾದ್ ಯಾದವ್ ಇದು ಆಧಾರ ರಹಿತ ಎಂದು ಹೇಳಿದ್ದು, ಸೋಲು ಖಚಿತವಾಗಿರುವ ಹತಾಶೆಯಲ್ಲಿ ಬಿಜೆಪಿಗರು ಈ ಕೃತ್ಯಕ್ಕಿಳಿದಿದ್ದಾರೆ ಎಂದು ಕಟುಟೀಕೆ ಮಾಡಿದ್ದಾರೆ.
ಮತ್ತಷ್ಟು
ಸರಕಾರದಿಂದ ಸಿಬಿಐ ದುರ್ಬಳಕೆ: ಬಿಎಸ್‌ಪಿ ಆರೋಪ
ಕೊನೆ ಕ್ಷಣದ ಬಲಾಬಲ ಇಂತಿದೆ
ಸ್ವಾಮಿ ಶೃದ್ಧಾನಂದಗೆ ಜೀವಾವಧಿ ಶಿಕ್ಷೆ
ಟೈ ಆದರೆ ಸ್ಪೀಕರ್ ಚಟರ್ಜಿ ಮತ ಯಾರಿಗೆ?
ರಾಹುಲ್ ಭಾಷಣಕ್ಕೆ ಅಡ್ಡಿ, ಸದನ ಮುಂಡೂಡಿಕೆ
ರಾಮಸೇತು ವಿಚಾರಣೆ ಮುಂದೂಡಿಕೆಗೆ ಸು.ಕೋ.ನಕಾರ