ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೀಕರ್ ಮುಖದಲ್ಲಿ ನಗು ಮೂಡಿಸಿದ ಲಾಲೂ ಭಾಷಣ  Search similar articles
PTI
ವಿಶ್ವಾಸಮತ ಗೊತ್ತುವಳಿಯ ಚರ್ಚೆಯಲ್ಲಿ ಅತಿ ನಿರೀಕ್ಷಿತ ಭಾಷಣಕಾರನಾದ ಆರ್‌ಜೆಡಿ ಮುಖ್ಯಸ್ಥ ಮತ್ತು ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ತನ್ನ ಭಾಷಣದಲ್ಲಿ ರಾಕ್ಷಸರು(ವಿರೋಧ ಪಕ್ಷ) ಗಾವ್ ಬೇಲಾ(ಗೋ ಧೂಳಿ ಸಮಯ)ದಲ್ಲಿ ದಮನಗೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಮಂತ್ರಿವರ್ಗದ ಪೀಠದಲ್ಲಿ ಮತ್ತು ಸ್ಪೀಕರ್ ಚಟರ್ಜಿ ಮುಖದಲ್ಲಿ ನಗುವನ್ನು ಮೂಡಿಸಿದರು.

ರಾಕ್ಷಸರನ್ನು ಯಾವಾಗಲೂ ಮುಸ್ಸಂಜೆ ಹೊತ್ತಲ್ಲೇ ಬಲಿದಾನ ಮಾಡಲಾಗುತ್ತದೆ. ಇಂದು ಕೂಡಾ... ವೈರಿಯನ್ನು ಇದೇ ಗಾವ್ ಬೇಲಾದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಸೋಲಿಸಲಾಗುತ್ತದೆ. ಆದರೆ, ಮತದಾನವು ಗೋಧೂಳಿಯ ಸಮಯದಲ್ಲೇ ಅಂದರೆ ನಿಖರವಾಗಿ ಆರು ಗಂಟೆಗೇ ನಡೆಯಬೇಕು ಎಂದು ನುಡಿದರು.

ವಿಶ್ವಾಸಮತ ಯಾಚನೆಯು ಆರು ಗಂಟೆಗೆ ನಿಗದಿಯಾಗಿದ್ದು, ಈ ಸಮಯವನ್ನು ಬದಲಾಯಿಸಬಾರದು ಎಂದು ಲಾಲು ಯಾದವ್ ಸ್ಪೀಕರ್‌ಗೆ ಇದೇ ವೇಳೆ ಮನವಿ ಮಾಡಿದರು.

ಈ ನಡುವೆ, ಅಣು ಒಪ್ಪಂದವನ್ನು ವಿರೋಧಿಸುತ್ತಿರುವವರಿಗೆ, ಅದರಲ್ಲೂ ವಿಶೇಷವಾಗಿ ಎಡಪಕ್ಷಗಳ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ ಲಾಲೂ, 'ಮೇಡ್ ಇನ್ ಅಮೆರಿಕ' ಎಂದು ಬರೆದ ಬಟ್ಟೆಬರೆಗಳನ್ನು ಉಪಯೋಗಿಸುತ್ತಾರೆ, ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಅಮೆರಿಕ ಶಾಲೆಗಳಿಗೆ ಕಳುಹಿಸುತ್ತಾರ; ಆದರೂ, ಅಣು ಒಪ್ಪಂದವನ್ನು ವಿರೋಧಿಸುತ್ತಾರೆ ಎಂಬುದಾಗಿ ತನ್ನ ಎಂದಿನ ಹಾಸ್ಯಮಿಶ್ರಿತ ಶೈಲಿಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.
ಮತ್ತಷ್ಟು
ನೋಟು ಪ್ರದರ್ಶನ: ಪ್ರಜಾಸತ್ತೆಯ ಕರಾಳ ಅಧ್ಯಾಯ
ಸರಕಾರದಿಂದ ಸಿಬಿಐ ದುರ್ಬಳಕೆ: ಬಿಎಸ್‌ಪಿ ಆರೋಪ
ಕೊನೆ ಕ್ಷಣದ ಬಲಾಬಲ ಇಂತಿದೆ
ಸ್ವಾಮಿ ಶೃದ್ಧಾನಂದಗೆ ಜೀವಾವಧಿ ಶಿಕ್ಷೆ
ಟೈ ಆದರೆ ಸ್ಪೀಕರ್ ಚಟರ್ಜಿ ಮತ ಯಾರಿಗೆ?
ರಾಹುಲ್ ಭಾಷಣಕ್ಕೆ ಅಡ್ಡಿ, ಸದನ ಮುಂಡೂಡಿಕೆ