ನವದೆಹಲಿ: ಸದನದಲ್ಲಿ ಗದ್ದಲವೆಬ್ಬಿಸಿದ ಓಟಿಗಾಗಿ ನೋಟು ಪ್ರಕರಣದ ವಿಡಿಯೋ ಚಿತ್ರೀಕರಣದ ಸಿಡಿಯನ್ನು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿಯವರಿಗೆ ನೀಡಲಾಗಿದೆ ಎಂದು ಸಿಎನ್ಎನ್-ಐಬಿಎನ್ ಸುದ್ದಿವಾಹಿನಿ ಹೇಳಿದೆ.
ಬಿಜೆಪಿ ಸಂಸದ ಅಶೋಕ ಅರ್ಗಲ್ ಅವರಿಗೆ, ಅವರ ದೆಹಲಿ ನಿವಾಸದಲ್ಲಿ ಸೋಮವಾರ ರಾತ್ರಿ ಒಂದು ಕೋಟಿ ರೂಪಾಯಿಯನ್ನು ಸಮಾಜವಾದಿ ಪಕ್ಷ ನೀಡಿರುವುದನ್ನು ಚಿತ್ರೀಕರಣ ಮಾಡಲಾಗಿದೆ ಎಂದು ವಾಹಿನಿ ಹೇಳಿಕೊಂಡಿದೆ.
ಸಿಎನ್ಎನ್-ಐಬಿಎನ್‌ನ ಮುಖ್ಯಸ್ಥ ರಾಜ್‌ದೀಪ್ ಸರ್ದೇಸಾಯ್ ಸಂಸದ್ ಭವನದಲ್ಲಿರುವ ಸ್ಪೀಕರ್ ಕಚೇರಿ ಎದುರುಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು, ವಾಹಿನಿಯ ಇಬ್ಬರು ವರದಿಗಾರರು ಕುಟುಕು ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದ್ದಾರೆ.
ಸದನದಲ್ಲಿ ಪ್ರದರ್ಶಿಸಲಾದ ನೋಟಿನ ಕಂತೆಯ ಪ್ರದರ್ಶನ ಇನ್ನೂ ಪೂರ್ಣಗೊಂಡಿಲ್ಲ ಎಂದು ಅವರು ನುಡಿದರು.
|