ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊನೆಗೂ ಅಂತ್ಯ ಕಂಡ 'ಅಣುಬಂಧ' ಪ್ರಹಸನ  Search similar articles
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ವಿಚಾರದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ದೊಂದಿಗೆ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸು ತೆಗೆದುಕೊಳ್ಳುವ ಮೂಲಕ, ತ್ರಿಶಂಕು ಸ್ಥಿತಿಗೆ ತಲುಪಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಕೊನೆಗೂ ಅಂತಿಮ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗು ಬೀರುವಂತಾಗಿದೆ.

ಕಳೆದ ನಾಲ್ಕು ವರ್ಷಗಳ ಕಾಲ ಯುಪಿಎ ಸರಕಾರಕ್ಕೆ ಬೆಂಬಲ ನೀಡಿದ್ದ ಎಡಪಕ್ಷಗಳು, ಅಮೆರಿಕದೊಂದಿಗಿನ ಅಣು ಒಪ್ಪಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದವು. ಅಲ್ಲದೇ ಕೇಂದ್ರ ಐಎಇಎ( ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ) ಜತೆ ಮಾತುಕತೆ ಮುಂದುವರಿಸಿದೇ ಆದಲ್ಲಿ ಬೆಂಬಲವನ್ನು ವಾಪಸು ತೆಗೆದುಕೊಳ್ಳುವ ಬೆದರಿಕೆಯನ್ನೂ ಹಾಕಿದ್ದವು.

ಅಣು ಒಪ್ಪಂದದ ತಾಕಲಾಟದಲ್ಲಿ ದೇಶದಲ್ಲಿ ಕಳೆದ 13ವರ್ಷಗಳಲ್ಲಿಯೇ ಕಾಣದ ಹಣದುಬ್ಬರವನ್ನು ಜನಸಾಮಾನ್ಯರೂ ಅನುಭವಿಸುವಂತಾಗಿತ್ತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳದಿಂದಾಗಿ ಪೆಟ್ರೋಲ್, ಡಿಸೇಲ್ ಬೆಲೆ ಏರುವ ಮೂಲಕ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಆದರೆ ಆಡಳಿತರೂಢ ಮತ್ತು ವಿರೋಧ ಪಕ್ಷಗಳೆರಡೂ ಅದ್ಯಾವ ಸಮಸ್ಯೆಗಳತ್ತ ಚಿತ್ತ ಹರಿಸದೆ, ಕೇವಲ ಅಣುಬಂಧದ ಸುತ್ತಲೇ ತಿರುಗುತ್ತ ಆರೋಪ-ಪ್ರತ್ಯಾರೋಪಗಳಲ್ಲಿ ತಲ್ಲೀನವಾಗಿದ್ದವು.

ಅಣು ಒಪ್ಪಂದದ ಕುರಿತು ಆಡಳಿತರೂಢ ಯುಪಿಎ ಸರಕಾರ ತಾವು ಒಪ್ಪಂದದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂಬುದಾಗಿ ಘೋಷಿಸಿದ ಬಳಿಕ ಎಡಪಕ್ಷಗಳು ಬೆಂಬಲ ವಾಪಸು ಪಡೆಯುವ ಮೂಲಕ ರಾಷ್ಟ್ರರಾಜ್ಯಕಾರಣದಲ್ಲಿ ತ್ರಿಶಂಕು ಸ್ಥಿತಿ ತಲೆದೋರಿತ್ತು. ಇದರಿಂದಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಂಸತ್‌ನಲ್ಲಿ ವಿಶ್ವಾಸಮತ ಕೋರುವ ಸ್ಥಿತಿ ಬಂದೊದಗಿತು.

ಅಲ್ಲದೇ ಸೈದ್ದಾಂತಿಕ ನಿಲುವಿನ ಮೇಲೆ ಅಣು ಒಪ್ಪಂದವನ್ನು ವಿರೋಧಿಸುತ್ತ ಬಂದ ಎಡಪಕ್ಷಗಳು ಯುಪಿಎ ಸರಕಾರವನ್ನು ಉರುಳಿಸಲು ಸಾಕಷ್ಟು ಯತ್ನಗಳು ನಡೆಸಿದವು, ಅದರಂತೆ ಸರಕಾರದ ಉಳಿವಿಗಾಗಿ ಕಾಂಗ್ರೆಸ್ ಕೂಡ ಭಾರೀ ಮೊತ್ತದ 'ಕುದುರೆ ವ್ಯಾಪಾರ'ಕ್ಕೆ ಇಳಿದಿರುವುದು ಜಗಜ್ಜಾಹೀರಾಗಿತ್ತು.

ಎಡಪಕ್ಷ, ಬಿಜೆಪಿ ಮೈತ್ರಿಕೂಟದ ಎನ್‌ಡಿಎ, ಮಮತಾ ಬ್ಯಾನರ್ಜಿ, ಶಿವಸೇನೆ, ಜೆಡಿಯು, ಜೆಡಿಎಸ್, ಬಿಜೆಡಿ ಅಣು ಒಪ್ಪಂದದ ವಿರುದ್ಧವಾಗಿ ನಿಂತರೆ, ಯುಪಿಎ ಮೈತ್ರಿಕೂಟ, ಸಮಾಜವಾದಿಪಕ್ಷ. ಡಿಎಂಕೆ, ಜೆಎಂಎಂ, ಆರ್‌ಜೆಡಿ, ಎಲ್‌ಜೆಎಸ್‌‌ಪಿ ಸೇರಿದಂತೆ ಉಳಿದ ಸಣ್ಣಪುಟ್ಟ ಪಕ್ಷ ಹಾಗೂ ಪಕ್ಷೇತರರು ಅಣು ಒಪ್ಪಂದದ ಪರ ನಿಲ್ಲುವ ಮೂಲಕ ಅಣು ಒಪ್ಪಂದ ಪ್ರತಿಷ್ಠೆಯ ಪ್ರಶ್ನೆಯಾಗಿ ತಲೆ ಎತ್ತಿತ್ತು.

ವಿಶ್ವಾಸಮತ ಪಡೆಯುವ ಎರಡು ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಹಿಂದೆಂದೂ ಕಂಡರಿಯದಷ್ಟು ಮಟ್ಟದ ಹಣದ ಹೊಳೆ ಹರಿಯಿತೆನ್ನಲಾಗಿದ್ದು, ತಮ್ಮನ್ನು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರು ಗೈರು ಹಾಜರಾಗುವಂತೆ ಕೋಟಿ ರೂಪಾಯಿಗಳ ಲಂಚ ನೀಡಿರುವುದಾಗಿ ಹಣದ ಬ್ಯಾಗ್ ಅನ್ನು ಸಂಸತ್‌‌ನಲ್ಲಿಯೇ ತೋರಿಸುವ ಮೂಲಕ ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತದ ಗೌರವಕ್ಕೆ ಮಸಿ ಬಳಿದಂತಾಗಿದೆ.
ಮತ್ತಷ್ಟು
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್
ಐಬಿಎನ್ ಸ್ಟಿಂಗ್ ಕಾರ್ಯಾಚರಣೆ: ಸ್ಪೀಕರ್‌ಗೆ ಟೇಪು
ಸ್ಪೀಕರ್ ಮುಖದಲ್ಲಿ ನಗು ಮೂಡಿಸಿದ ಲಾಲೂ ಭಾಷಣ
ನೋಟು ಪ್ರದರ್ಶನ: ಪ್ರಜಾಸತ್ತೆಯ ಕರಾಳ ಅಧ್ಯಾಯ
ಲೋಕಸಭೆ ಗದ್ದಲ: ಚಟರ್ಜಿಯ ಕಟು ಗದರಿಕೆ
ಸರಕಾರದಿಂದ ಸಿಬಿಐ ದುರ್ಬಳಕೆ: ಬಿಎಸ್‌ಪಿ ಆರೋಪ