ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಪ್ರಧಾನಿ  Search similar articles
PTIPTI
ಅಣುಒಪ್ಪಂದದ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಅವರ ಆರೋಪದ ಕುರಿತು ಪ್ರತ್ಯುತ್ತರ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಗುಜರಾತ್ ದುರಂತ ಮತ್ತು ಕಂದಾಹಾರ್ ಹೈಜಾಕ್ ಪ್ರಕರಣದ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂಬುದಾಗಿ ಹೇಳಿದರು.

ಮಂಗಳವಾರ ಅಣುಒಪ್ಪಂದ ಕುರಿತಂತೆ ಸಂಸತ್‌ನಲ್ಲಿ ನಡೆದ ಅಣು ಚರ್ಚೆಯಲ್ಲಿ ಪ್ರತಿಪಕ್ಷಗಳ ಭಾರೀ ಕೋಲಾಹಲದ ನಡುವೆ ಉತ್ತರ ನೀಡುತ್ತ ಮಾತನಾಡಿದ ಪ್ರಧಾನಿ, ಅಲ್ಲದೇ ಅಣು ಒಪ್ಪಂದದ ವಿಚಾರದಲ್ಲಿ ನಮ್ಮ ಮಿತ್ರರಾದ 'ಎಡಪಕ್ಷ'ದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸೇರಿದಂತೆ ಎಡಪಕ್ಷಗಳು ತಪ್ಪು ಲೆಕ್ಕಾಚಾರವನ್ನು ಮಾಡಿರುವುದಾಗಿ ದೂರಿದರು.

ಏತನ್ಮಧ್ಯೆ ಪ್ರಧಾನಿಯವರು ಮಾತನಾಡುತ್ತಿದ್ದಾಗಲೇ, ಸದನದಲ್ಲಿಯೇ ರಾಜಾರೋಷವಾಗಿ ನಡೆದ ಲಂಚ ಪ್ರಕರಣದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು,ಪ್ರಧಾನಿ ಸಿಂಗ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದವು.

ಕೆಲವೊಂದು ವಿಚಾರದಲ್ಲಿ ಲಾಲ್‌ಕೃಷ್ಣ ಆಡ್ವಾಣಿಯವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದ ಪ್ರಧಾನಿ ಸಿಂಗ್, ಸಂಸತ್‌ನ ಕದವನ್ನು ಭಯೋತ್ಪಾದಕರು ತಟ್ಟುವ ಸಂದರ್ಭದಲ್ಲಿ ಯಾರು ಕೇಂದ್ರದ ಗೃಹಸಚಿವರಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದರು. ಅಲ್ಲದೇ ಯಾರ ನೇತೃತ್ವದಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಿತ್ತು ಎಂಬುದು ಈ ದೇಶದ ಜನಕ್ಕೆ ತಿಳಿದಿದೆ ಎಂದು ಹೇಳಿದರು.
ಮತ್ತಷ್ಟು
ಕೊನೆಗೂ ಅಂತ್ಯ ಕಂಡ 'ಅಣುಬಂಧ' ಪ್ರಹಸನ
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್
ಐಬಿಎನ್ ಸ್ಟಿಂಗ್ ಕಾರ್ಯಾಚರಣೆ: ಸ್ಪೀಕರ್‌ಗೆ ಟೇಪು
ಸ್ಪೀಕರ್ ಮುಖದಲ್ಲಿ ನಗು ಮೂಡಿಸಿದ ಲಾಲೂ ಭಾಷಣ
ನೋಟು ಪ್ರದರ್ಶನ: ಪ್ರಜಾಸತ್ತೆಯ ಕರಾಳ ಅಧ್ಯಾಯ
ಲೋಕಸಭೆ ಗದ್ದಲ: ಚಟರ್ಜಿಯ ಕಟು ಗದರಿಕೆ