ಕೇಂದ್ರ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಯುಪಿಎ ಜತೆ ಎನ್‌ಡಿಎ 'ಕೈ' ಜೋಡಿಸಿರುವುದಾಗಿ ಗಂಭೀರವಾಗಿ ಆರೋಪಿಸಿರುವ ಬಿಎಸ್ಪಿಯ ವರಿಷ್ಠೆ ಮಾಯಾವತಿ, ದಲಿತ ವಿರೋಧಿ ವ್ಯಕ್ತಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದಾಗಿ ಅವರು ದೂರಿದರು.
ಅಣುಬಂಧದ ಅಗ್ನಿಪರೀಕ್ಷೆಯಲ್ಲಿ ಯುಪಿಎ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಉರುಳದಂತೆ ಕೈಜೋಡಿಸಿರುವುದಾಗಿ ಹೇಳಿದರು.
ಇದು ಯುಪಿಎಗೆ ಸಂದ ನೈತಿಕ ಗೆಲುವಲ್ಲ, ಇದೊಂದು ವ್ಯವಸ್ಥಿತವಾದ ಸಂಚು. ಯುಪಿಎ ಮತ್ತು ಎನ್‌ಡಿಎ ಸೇರಿದಂತೆ ಕೆಲವು ಪಕ್ಷಗಳಿಗೆ ತಾನು ಅಧಿಕಾರಕ್ಕೆ ಬರುವುದು ಇಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ. ಎರಡೂ ಪಕ್ಷಗಳೂ ತನಗೆ ಹೆದರುವುದಾಗಿ ಅವರು ಟೀಕಿಸಿದರು. ಇದು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಮಮತಾ ಬಣ್ಣಿಸಿದರು.
|