ವಿಶ್ವಾಸ ಮತದಲ್ಲಿ ಗೆಲುವು ಸಾಧಿಸಿರುವುದು ಸರಕಾರ ಮತ್ತು ಪ್ರಧಾನಿ ಸರಿಯಾದ ನಿರ್ಧಾರವನ್ನೆ ಕೈಗೊಂಡಿದ್ದಾರೆ ಎಂಬುದರ ದ್ಯೋತಕ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ನಮಗೆ ವಿಶ್ವಾಸ ಮತದಲ್ಲಿನ ಸೋಲು ಗೆಲುವುಗಳಿಗಿಂತ ದೇಶದ ಹಿತಾಸಕ್ತಿ ಮುಖ್ಯವೆಂದು ಈ ಮೊದಲೆ ಹೇಳಿದ್ದೆ, ಅದನ್ನೆ ಪ್ರಧಾನಿ ಅನುಸರಿಸಿದರು ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷ ಬಿಜೆಪಿಯ ಕೆಲವು ಸಂಸದರನ್ನು ಚುನಾವಣೆಯಿಂದ ದೂರವಿರುವಂತೆ ಮಾಡಲು ಲಂಚ ನೀಡಿದೆ ಎಂಬ ಆರೋಪ ತಮಗೆ ಅಸಹ್ಯ ಉಂಟುಮಾಡಿದೆ ಎಂದವರು ತಿಳಿಸಿದ್ದಾರೆ.
|