ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿನಂದನೆಗಳು, ಸಿಂಗ್ ಈಸ್ ಕಿಂಗ್!  Search similar articles
PTI
ಭಾರತಕ್ಕೆ ಅಭಿನಂದನೆಗಳು.... ಸಿಂಗ್ ಈಸ್ ಕಿಂಗ್.... ಇತ್ಯಾದಿ ಶುಭಾಶಯ ಕೋರುವ ಎಸ್ಎಂಎಸ್‌‌ಗಳು ವಿಶ್ವಾಸಮತದಲ್ಲಿ ಯುಪಿಎ ಸರಕಾರ ಗೆಲುವು ಸಾಧಿಸಿದ ಕೆಲವೇ ಕ್ಷಣಗಳಲ್ಲಿ ಪಂಜಾಬ್ ಮತ್ತು ಇತರೆಲ್ಲೆಡೆ ಒಬ್ಬರಿಂದೊಬ್ಬರಿಗೆ ರವಾನೆಯಾಗುತ್ತಿದ್ದು, ಈ ಎಸ್ಎಂಎಸ್‌ಗಳು ಯುಪಿಎ ಬೆಂಬಲಿಗರ ಹರ್ಷೋತ್ಕರ್ಷದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದವು.

ಸರಕಾರವು 275-256ರ ಅಂತರದಲ್ಲಿ ಸಂಸದರ ಬೆಂಬಲವನ್ನು ಪಡೆದು ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದೆ ಎಂದು ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಘೋಷಿಸಿದ ಕ್ಷಣದಲ್ಲೇ, ಅಮೃತಸರ, ಪಂಜಾಬ್ ಮತ್ತು ಇತರ ಪ್ರದೇಶಗಳಲ್ಲಿ ಸಂಭ್ರಮಾಚರಣೆಯು ಮುಗಿಲು ಮುಟ್ಟಿತ್ತು.

ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಿಹಿ ತಿಂಡಿಗಳನ್ನು ಹಂಚಿದರು.

ಅಮೃತಸರ ಮತ್ತು ಲುಧಿಯಾನಾದಲ್ಲಿ ನೆಲೆಸಿರುವ ಸಿಂಗ್ ಅವರ ಸಂಬಂಧಿಕರು ವಿಶ್ವಾಸಮತ ಗೆಲುವಿನ ಸಂಬಂಧ ಈ ವಾರ ಪೂಜೆಯನ್ನು ನಡೆಸಲಿದ್ದಾರೆ.

ಏನೇ ಆದರೂ, ಪಂಜಾಬ್‌ನ ಆಡಳಿತಾರೂಢ ಅಕಾಲಿ ದಳವು ಪ್ರಧಾನಮಂತ್ರಿ ಅವರನ್ನು ಬೆಂಬಲಿಸಲು ಖಡಾಖಂಡಿತವಾಗಿ ನಿರಾಕರಿಸಿದ್ದು, ಮನಮೋಹನ್ ಸಿಂಗ್ ಅವರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದು, ಪಂಜಾಬ್ ರಾಜ್ಯದವರಾಗಿದ್ದರೂ, ಪಂಜಾಬ್ ರಾಜ್ಯ ಹಾಗೂ ಸಿಖ್ ಸಮುದಾಯಕ್ಕೆ ಏನೂ ಸಹಾಯ ಮಾಡಿಲ್ಲ ಎಂಬುದಾಗಿ ಆರೋಪಿಸಿದರು.

ಮನಮೋಹನ್ ಸಿಂಗ್ ಅವರು ದೇಶದ ಮೊದಲ ಸಿಖ್ ಪ್ರಧಾನಿ ಆಗಿದ್ದಾರೆ.
ಮತ್ತಷ್ಟು
ಪ್ರಧಾನಿಯದ್ದು ಸರಿಯಾದ ನಿರ್ಧಾರ: ರಾಹುಲ್
ಬಿಎಸ್ಪಿ ವಿರುದ್ಧ ಎನ್‌ಡಿಎ-ಯುಪಿಎ ಕೈಜೋಡಿಕೆ: ಮಾಯಾ
ಆಡ್ವಾಣಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಪ್ರಧಾನಿ
ಕೊನೆಗೂ ಅಂತ್ಯ ಕಂಡ 'ಅಣುಬಂಧ' ಪ್ರಹಸನ
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್
ಐಬಿಎನ್ ಸ್ಟಿಂಗ್ ಕಾರ್ಯಾಚರಣೆ: ಸ್ಪೀಕರ್‌ಗೆ ಟೇಪು