ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ'ದಾನಿ'ಗಳಲ್ಲಿ ಕರ್ನಾಟಕದ ನಾಲ್ವರು!  Search similar articles
PTI
ಕಳೆದ ಕೆಲವು ದಿನಗಳಿಂದ ವಿಶ್ವಾದ್ಯಂತ ಕುತೂಹಲ ಕೆರಳಿಸಿದ್ದ ವಿಶ್ವಾಸಮತ ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಗೆಲುವು ಸಾಧಿಸಿದ್ದು, ಏಳು ಬಿಜೆಪಿ ಸಂಸದರು ಸೇರಿದಂತೆ ವಿಶ್ವಾಸಮತದ ವೇಳೆಗೆ ನೀಡಿದ ಅಡ್ಡಮತಗಳು ಯುಪಿಎ ಸರಕಾರ 275 ಮತಗಳೊಂದಿಗೆ ತೃಪ್ತಿಕರ ಅಂತರದಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಿದೆ.

ಬಿಜೆಪಿಯ ಏಳು ಸಂಸದರು, ಜೆಡಿಯುನ ಇಬ್ಬರು, ಟಿಡಿಪಿ, ಟಿಆರ್ಎಸ್, ಬಿಜೆಡಿ, ಜೆಡಿಎಸ್ ಹಾಗೂ ಅಕಾಲಿ ದಳದ ತಲಾ ಒಬ್ಬರು ಅಡ್ಡಮತದಾನ ಮಾಡಿ ವಿಶ್ವಾಸಮತದ ಗೆಲುವಿಗೆ ಕಾರಣರಾದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಎಚ್.ಟಿ.ಸಾಂಗ್ಲಿಯಾನಾ, ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ಮಂಜುನಾಥ ಕುನ್ನೂರ್ ಯುಪಿಎ ಪರವಾಗಿ ಮತ ಚಲಾಯಿಸುವ ಮೂಲಕ ಬಿಜೆಪಿಯ ವಿಪ್ ಅನ್ನು ಉಲ್ಲಂಘಿಸಿ ಕರ್ನಾಟಕ ಬಿಜೆಪಿಗೆ ಅನಿರೀಕ್ಷಿತ ಅಘಾತ ನೀಡಿದರು. ಉಡುಪಿಯ ಮನೋರಮಾ ಮಧ್ವರಾಜ್ ಚರ್ಚೆ ಪೂರ್ಣಗೊಳ್ಳುವವರೆಗೂ ಸದನದಲ್ಲಿಯೇ ಇದ್ದು, ಮತದಾನದ ವೇಳೆ ಸಂಸತ್ತಿನಿಂದ 'ಕಾಣೆ'ಯಾಗಿದ್ದರು. ಅನಾರೋಗ್ಯದ ನಿಮಿತ್ತ ಚಿಕ್ಕಮಗಳೂರು ಸಂಸದ ಡಿ.ಸಿ.ಶ್ರೀಕಂಟಪ್ಪ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.

ಶಿವಸೇನಾದ ತುಕರಾಂ ರಿಂಜೆ ಮತದಾನದಿಂದ ದೂರವೇ ಉಳಿದಿದ್ದು, ಬಿಜೆಪಿಯ ಮೂರು ಸಂಸದರು ಮತದಾನದ ವೇಳೆ ತಮ್ಮ ಸ್ಥಾನದಲ್ಲಿರಲಿಲ್ಲ.

ಅಡ್ಡಮತದಾನಿಗಳು -
ಸೋಂಭಾಯ್ ಪಟೇಲ್-ಗುಜರಾತ್ (ಬಿಜೆಪಿ)
ಕೆ.ಮಂಜುನಾಥ್-ಕರ್ನಾಟಕ (ಬಿಜೆಪಿ)
ಎಚ್.ಟಿ.ಸಾಂಗ್ಲಿಯಾನಾ-ಕರ್ನಾಟಕ (ಬಿಜೆಪಿ)
ಬ್ರಿಜ್ ಭೂಷಣ್ ಶರಣ್ ಸಿಂಗ್-ಉತ್ತರ ಪ್ರದೇಶ (ಬಿಜೆಪಿ)
ಚಂದ್ರಭನ್ ಸಿಂಗ್-ಮಧ್ಯಪ್ರದೇಶ (ಬಿಜೆಪಿ)
ರಾಮಸ್ವರೂಪ್ ಪ್ರಸಾದ್-ಬಿಹಾರ್ (ಜೆಡಿಯು)
ಹರಿಹರ್ ಸ್ವೈನ್- (ಬಿಜೆಡಿ)
ಜಗನ್ನಾಥ್- (ಟಿಡಿಪಿ)
ಎ.ನರೇಂದ್ರ (ಟಿಆರ್ಎಸ್)

ಡಿವಿಎಸ್ ಆಕ್ರೋಶ
ಏತನ್ಮಧ್ಯೆ, ಬಿಜೆಪಿಯ ವಿಪ್ ಉಲ್ಲಂಘಿಸಿ ವಿಶ್ವಾಸಮತದಲ್ಲಿ 'ಕೈ' ಹಿಡಿದಿರುವ ಕರ್ನಾಟಕ ಸಂಸದರುಗಳಾದ ಬಿಜೆಪಿಯ ಎಚ್.ಟಿ.ಸಾಂಗ್ಲಿಯಾನಾ ಮತ್ತು ಮಂಜುನಾಥ್ ಕುನ್ನೂರ್ ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿ.ಸದಾನಂದ ಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶ್ವಾಸಮತದಲ್ಲಿ ಈ ವಿಶ್ವಾಸದ್ರೋಹಿಗಳ ವಿಶ್ವಾಸದ್ರೋಹದಿಂದಾಗಿ ಸಾಕಷ್ಟು ಪಾಠ ಕಲಿಯಬೇಕಾಗಿದ್ದು, ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದ, ಪಕ್ಷಕ್ಕೆ ದ್ರೋಹವೆಸಗುವವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ವಿಶ್ವಾಸದ್ರೋಹವೇ ಸಾಕ್ಷಿ ಎಂದು ಸದಾನಂದ ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಮತ್ತಷ್ಟು
ಅಭಿನಂದನೆಗಳು, ಸಿಂಗ್ ಈಸ್ ಕಿಂಗ್!
ಪ್ರಧಾನಿಯದ್ದು ಸರಿಯಾದ ನಿರ್ಧಾರ: ರಾಹುಲ್
ಬಿಎಸ್ಪಿ ವಿರುದ್ಧ ಎನ್‌ಡಿಎ-ಯುಪಿಎ ಕೈಜೋಡಿಕೆ: ಮಾಯಾ
ಆಡ್ವಾಣಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಪ್ರಧಾನಿ
ಕೊನೆಗೂ ಅಂತ್ಯ ಕಂಡ 'ಅಣುಬಂಧ' ಪ್ರಹಸನ
'ಅಣು'ಪರೀಕ್ಷೆಯಲ್ಲಿ ಮನಮೋಹನ್ ಸಿಂಗ್ ಪಾಸ್