ಸುಮಾರು 2.8 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಯನ್ನು ಹೊಂದಿರುವ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಕಾರ್ಯದರ್ಶಿ ಅಖಂಡ್ ಪ್ರತಾಪ್ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು 11 ಮಂದಿಗೆ ವಿಶೇಷ ಸಿಬಿಐ ನ್ಯಾಯಾಲಯವು ಸಮನ್ಸ್ ನೀಡಿದೆ.
ಈ ಪ್ರಕರಣವನ್ನು ಮುಂದುವರಿಸಲು ಆರೋಪಿಗಳ ವಿರುದ್ಧ ಸಾಕ್ಷಿಗಳಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೆಚ್ಚುವರಿ ಅವಧಿಯ ನ್ಯಾಯಾಧೀಶ ಆರ್.ಕೆ.ಯಾದವ್ ತಿಳಿಸಿದ್ದಾರೆ.
ಅತಿ ಭೃಷ್ಟ ಇಲಾಖಾಧಿಕಾರಿ ಎಂಬುದಾಗಿ ಯುಪಿ ಐಎಎಸ್ ಸಂಘಟನೆಯಿಂದ ಆರೋಪಕ್ಕೊಳಪಟ್ಟ 1976ರ ತಂಡದ ಐಎಎಸ್ ಅಧಿಕಾರಿ ಅಲ್ಲದೆ, ಈ ಅಧಿಕಾರಿಯ ಇಬ್ಬರು ವಿವಾಹಿತ ಪುತ್ರಿಯರು, ಮಾಜಿ ಸಿಬಿಎಸ್ಇ ಅಧ್ಯಕ್ಷ ಬಿ.ಪಿ.ಕುಂಡೇಲ್ವಾಲ್ ಮತ್ತು ಇತರರ ವಿರುದ್ಧ ಭೃಷ್ಟಾಚಾರಕ್ಕೆ ಉತ್ತೇಜನ ನೀಡುವ ಕುರಿತಾಗಿ ಸಿಬಿಐ ಆರೋಪ ಪಟ್ಟಿಯನ್ನು ಹೊಂದಿದೆ.
ಸಿಂಗ್ ಪರವಾಗಿ ಬೆನಾಮಿ ಆಸ್ತಿ ಸ್ವಾಧೀನಕ್ಕಾಗಿ ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪವನ್ನು ಇತರ 11 ಮಂದಿ ಎದುರಿಸುತ್ತಿದ್ದಾರೆ.
|