ಮಂಗಳವಾರ ಲೋಕಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗೆಲುವು ಸಾಧಿಸಿದ ನಂತರ ಅಣು ಒಪ್ಪಂದದಲ್ಲಿನ ಮುಂದಿನ ಹೆಜ್ಜೆಯೆಂಬಂತೆ, ವಾಣಿಜ್ಯ ಉದ್ದೇಶಕ್ಕಾಗಿ ಪರಮಾಣು ಬಳಸಲು ರಿಯಾಯಿತಿ ನೀಡುವ ನಿಟ್ಟಿನಲ್ಲಿ ಪರಮಾಣು ಪೂರೈಕಾ ಸಮೂಹ(ಎನ್ಎಸ್‌ಸಿ) ರಾಷ್ಟ್ರಗಳೊಂದಿಗೆ ಭಾರತವು ಪೂರ್ಣಪ್ರಮಾಣದ ಬೃಹತ್ ಆಂದೋಲನವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಅಣು ಒಪ್ಪಂದವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳವಲ್ಲಿ ಭಾರತಕ್ಕೆ ಅನುಮತಿ ನೀಡುವಲ್ಲಿ ಹಿಡಿತವನ್ನು ಹೊಂದಿರುವ ರಾಷ್ಟ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಮೆರಿಕದೊಂದಿಗಿನ ಅಣು ಒಪ್ಪಂದಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿ ಅಧಿಕಾರಿಗಳು ಮತ್ತು ಸಚಿವರ ತಂಡವು ವಿವಿಧ ಎನ್ಎಸ್‌ಜಿ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿದೆ.
ಆಗಸ್ಟ್ ಒಂದರಂದು ನಿಗದಿಯಾಗಿರುವ ಸಭೆಯಲ್ಲಿ ಭಾರತದ ಪ್ರತ್ಯೇಕ ಸುರಕ್ಷತಾ ಒಪ್ಪಂದಕ್ಕೆ ಐಎಇಎ ಆಡಳಿತ ಮಂಡಳಿಯ ಅನುಮೋದನೆಯನ್ನು ಸರಕಾರವು ನಿರೀಕ್ಷಿಸುತ್ತಿದೆ.
ಪರಮಾಣು ಕಾವಲುಸಮಿತಿಯ ಅನುಮೋದನೆಯ ನಂತರ, ಅಂತಾರಾಷ್ಟ್ರೀಯ ಪಂಗಡಗಳೊಂದಿಗೆ ನಾಗರಿಕ ಪರಮಾಣು ಸಹಕಾರವನ್ನು ಪಡೆದುಕೊಳ್ಳಲು ಭಾರತಕ್ಕೆ ಅನುಮತಿ ದೊರೆಯುವಲ್ಲಿ ಎನ್ಎಸ್‌ಜಿ ರಾಷ್ಟ್ರಗಳೊಂದಿಗೆ ಒಮ್ಮತ ಸಾಧಿಸುವ ಅಗತ್ಯವಿದೆ.
ಸಚಿವರುಗಳಾದ ಕಪಿಲ್ ಸಿಬಾಲ್, ಪ್ರಥ್ವಿರಾಜ್ ಚವಾಣ್ ಮತ್ತು ಆನಂದ್ ಶರ್ಮಾ ಅವರು, ಭಾರತದ ಪರಿಸ್ಥಿತಿಯನ್ನು ಮತ್ತು ರಿಯಾಯಿತಿ ನೀಡಲು ಬೇಕಾದ ಕಾರಣಗಳನ್ನು ಆಂದೋಲನದ ವೇಳೆ ವಿಸ್ತೃತವಾಗಿ ವಿವರಿಸಲಿದ್ದಾರೆ.
ಸಚಿವರ ಹೊರತಾಗಿ, ರಾಷ್ಟ್ರೀಯ ರಕ್ಷಣಾ ಸಲಹಾಗಾರ ಎಂ.ಕೆ.ನಾರಾಯಣ್, ವಿದೇಶಿ ಕಾರ್ಯದರ್ಶಿ ಶಿವಶಂಕರ್ ಮೆನನ್ ಮತ್ತು ವಿದೇಶಾಂಗ ವ್ಯವಹಾರಗಳ ಇತರ ಅಧಿಕಾರಿಗಳು ಬೆಂಬಲವನ್ನು ಪಡೆದುಕೊಳ್ಳಲು ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಅಲ್ಲದೆ, ಬೆಂಬಲ ಪಡೆಯುವ ನಿಟ್ಟಿನಲ್ಲಿ ಎನ್‌ಎಸ್‌ಸಿ ರಾಷ್ಟ್ರಗಳ ಸರಕಾರದ ಮನವೊಲಿಸುವಂತೆ ಎನ್‌ಎಸ್‌ಸಿ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸರಕಾರವು ಸೂಚನೆ ನೀಡುವ ನಿರೀಕ್ಷೆ ದಟ್ಟವಾಗಿದೆ.
|