ತಮ್ಮ ಪಕ್ಷ ಸಿಪಿಐ-ಎಂನ ತೀವ್ರ ಒತ್ತಡದ ನಡುವೆಯೂ ಸ್ಥಾನ ತೊರೆಯದೆ, ಕುರ್ಚಿಗಂಟಿಕೊಂಡ ಸ್ಪೀಕರ್ ಸೋಮನಾಥ ಚಟರ್ಜಿ ಅವರು, ತಾನು ಸದ್ಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ. ತನ್ನ ಸ್ಥಾನದಲ್ಲಿ ಮುಂದುವರಿಯಲು ಇಚ್ಚೆ ಹೊಂದಿದ್ದು, ಒಂದೊಮ್ಮೆ ಸ್ಥಾನ ತೊರೆಯುವಂತೆ ಒತ್ತಡ ಹೇರಿದಲ್ಲಿ, ತನ್ನ ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹಠಮಾರಿ ಚಟರ್ಜಿ ಅವರು ಪಶ್ಚಿಮ ಬಂಗಾಳದ ಎಡರಂಗ ಅಧ್ಯಕ್ಷ ಬಿಮನ್ ಬೋಸ್ ಅವರಿಗೆ ತಿಳಿಸಿದ್ದಾರೆನ್ನಲಾಗಿದೆ.
ಯುಪಿಎ ಸರಕಾರಕ್ಕೆ ನೀಡಿರುವ ಬೆಂಬಲ ವಾಪಾಸ್ ಪಡೆದ ಬಳಿಕ ಅವರು ತನ್ನ ಸ್ಥಾನದಲ್ಲಿ ಮುಂದುವರಿಯುವುದರ ಔಚಿತ್ಯವಾದರೂ ಏನು ಎಂಬುದಾಗಿ ಬೋಸ್ ಮಂಗಳವಾರ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಚಟರ್ಜಿಯವರ ಸ್ಪಷ್ಟನೆ ಹೊರಬಿದ್ದಿದೆ.
ಈ ವಿಚಾರವು ಕೇಂದ್ರೀಯ ಸಮಿತಿಯಲ್ಲಿ ಚರ್ಚಿತವಾಗಿದ್ದು, ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರ ಕೈಗೊಳ್ಳಲು ಪಾಲಿಟ್ ಬ್ಯೂರೋಗೆ ಅಧಿಕಾರ ನೀಡಲಾಗಿದೆ ಎಂಬುದಾಗಿ ಹಿರಿಯ ನಾಯಕ ಸೀತಾರಾಮ ಯಚೂರಿ ಅವರೂ ಹೇಳಿದ್ದಾರೆ.
|