ಬೆಲೆ ಏರಿಕೆ, ಕೃಷಿ ಸಮಸ್ಯೆಗಳು ಹಾಗೂ ಪರಮಾಣು ಒಪ್ಪಂದದ ಕುರಿತಾಗಿ ಮತ್ತು ಲೋಕಸಭೆಯಲ್ಲಿನ ವಿಶ್ವಾಸಮತದ ಗೆಲುವು ಅನೈತಿಕ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಯುಪಿಎ 'ವೈರಿ'ಗಳಾದ ಎಡಪಕ್ಷ, ಯುಎನ್‌ಪಿಎ ಮತ್ತು ಬಿಎಸ್‌ಪಿ ದೇಶದಾದ್ಯಂತ ಚಳವಳಿಯನ್ನು ಪ್ರಾರಂಭಿಸಲಿದೆ ಎಂದು ಬುಧವಾರ ತಿಳಿಸಿದೆ.
ಮಂಗಳವಾರದ ಬೆಳವಣಿಗೆಗೆ ಯುಪಿಎ ಸರಕಾರವು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರಬಹುದು. ಆದರೆ, ಇದು ಪ್ರಜಾಪ್ರಭುತ್ವದ ಸೋಲು ಎಂಬುದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯುಪಿಎ ಸರಕಾರವು ಲೋಕಸಭೆಯಲ್ಲಿ ಮತವನ್ನು ಗೆದ್ದಿರಬಹುದು ಆದರೆ, ತನ್ನ ಅನೈತಿಕತೆಯಿಂದ ದೇಶದ ವಿಶ್ವಾಸವನ್ನು ಗೆಲ್ಲಲು ವಿಫಲವಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದರು.
ಮನಮೋಹನ್ ಸಿಂಗ್ ಸರಕಾರವು ತನ್ನ ನೈತಿಕ ಅಧಿಕಾರವನ್ನು ಕಳೆದುಕೊಂಡಿದೆ. ಈ ವಿವಾದವನ್ನು ಜನರ ಮುಂದಿಡುವ ನಿಟ್ಟಿನಲ್ಲಿ ರಾಷ್ಟ್ರೀಯ ಚಳವಳಿಯನ್ನು ಪ್ರಾರಂಭಿಸಲು ಎಲ್ಲಾ ರಾಜಕೀಯ ಪಕ್ಷಗಳು ನಿರ್ಧರಿಸಿವೆ ಎಂದು ಕಾರಟ್ ತಿಳಿಸಿದರು.
ಬಿಎಸ್‌ಪಿ, ಟಿಡಿಪಿ, ಫಾರ್ವರ್ಡ್ ಬ್ಲಾಕ್, ಆರ್ಎಸ್‌ಪಿ, ಜೆಡಿಎಸ್, ಆರ್ಎಲ್‌ಡಿ, ಐಎಂಎಲ್‌ಡಿಸ ಜೆವಿಎಂ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಚಳವಳಿಯಲ್ಲಿ ಭಾಗವಹಿಸಲಿವೆ.
|