ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟಾಚಾರದಲ್ಲಿ ಭಾರತ ಮುಂದು  Search similar articles
ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆಯೊಂದರಿಂದ ರಚಿಸಲ್ಪಟ್ಟ ವಿಶ್ವಾದ್ಯಂತ ಭೃಷ್ಟಾಚಾರ ಅರಿವು ಅಂಕಿಅಂಶ(ಸಿಪಿಐ)ದಲ್ಲಿ ಭಾರತವು 74ನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಮೆರಿಕವು 20ನೇ ಸ್ಥಾನದಲ್ಲಿದೆ. ಅತಿ ಕಡಿಮೆ ಭ್ರಷ್ಟಾಚಾರದ ಆಧಾರದಲ್ಲಿ ಸ್ಥಾನವನ್ನು ನಿರ್ಧರಿಸಲಾಗಿದೆ. ಈ ಮೂಲಕ ಭಾರತವು ಭ್ರಷ್ಟಾಚಾರದಲ್ಲಿ ಮುಂದಿದೆ ಎಂಬ ಅಂಶ ಮತ್ತೊಮ್ಮೆ ಸ್ಪಷ್ಟಗೊಂಡಿದೆ.

ಡೆನ್ಮಾರ್ಕ್, ಫಿನ್ಲಾಂಡ್, ನ್ಯೂಜಿಲ್ಯಾಂಡ್, ಸಿಂಗಾಪುರ ಮತ್ತು ಸ್ವೀಡನ್ ಅತಿ ಕಡಿಮೆ ಭ್ರಷ್ಟಾಚಾರ ಹೊಂದಿದ ರಾಷ್ಟ್ರಗಳಾಗಿವೆ. ಟ್ರಾನ್ಸ್ಪರನ್ಸಿ ಇಂಟರ್‌ನ್ಯಾಶನಲ್ ಎಂಬ ಅಂತಾರಾಷ್ಟ್ರೀಯ ಸರಕಾರೇತರ ಸ್ವತಂತ್ರ ಸಂಸ್ಥೆಯು ಸುಮಾರು 180 ದೇಶಗಳನ್ನು ಆಧರಿಸಿ ಈ ಅಂಕಿಅಂಶವನ್ನು ತಯಾರಿಸಿದೆ.

ಭ್ರಷ್ಟಾಚಾರದಲ್ಲಿ ಭಾರತವು ಎರಡು ಸ್ಥಾನಗಳಷ್ಟು ಮುಂದಿರುವುದಾಗಿ ವಾರ್ಷಿಕ ಜಾಗತಿಕ ಭ್ರಷ್ಟಾಚಾರ ವರದಿಗಳಲ್ಲಿ ಕಂಡುಬಂದಿದ್ದು, ಪಾಕಿಸ್ತಾನ 140, ಚೀನಾ 73ನೇ ಸ್ಥಾನವನ್ನು ಪಡೆದುಕೊಂಡಿದೆ.

ಇರಾನ್, ಲಿಬಿಯಾ ಮತ್ತು ನೇಪಾಳದಲ್ಲಿಯೂ ಭ್ರಷ್ಟಾಚಾರ ಪ್ರಮಾಣವು ಅತಿಯಾಗಿದೇ ಇದ್ದು, ಈ ದೇಶಗಳು ಕ್ರಮವಾಗಿ 133, 124, 135 ಸ್ಥಾನಗಳನ್ನು ಪಡೆದುಕೊಂಡಿವೆ. ರಶ್ಯಾ 145ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ 96 ಮತ್ತು 90ನೇ ಸ್ಥಾನದಲ್ಲಿವೆ.

ಅಭಿಪ್ರಾಯ, ಮತ ಸಮೀಕ್ಷೆ ಮತ್ತು ವಕೀಲರು, ಪತ್ರಕರ್ತರು, ವಿದ್ಯಾರ್ಥಿ ಮಂಡಳಿಯ ಸದಸ್ಯರು, ಸರಕಾರೇತರ ಸಂಸ್ಥೆ, ರಾಜಕೀಯ ವಿಶ್ಲೇಷಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಮುಂತಾದವರ ವೈಯಕ್ತಿಕ ಅಭಿಪ್ರಾಯ ಮತ್ತಿತರ ಅಂಶಗಳ ಆಧಾರದಲ್ಲಿ ಭ್ರಷ್ಟಾಚಾರ ಮಟ್ಟವನ್ನು ತಿಳಿದುಕೊಂಡು ದೇಶಗಳಿಗೆ ಸ್ಥಾನವನ್ನು ಸಿಪಿಐ ನೀಡಿದೆ.
ಮತ್ತಷ್ಟು
ಅಡ್ಡ ಮತ 'ದಾನಿ'ಗಳಿಗೆ ಕಷ್ಟ ಕಾಲ ಆರಂಭ
ಯುಪಿಎ ವಿರುದ್ಧ 'ವೈರಿ'ಗಳ ರಾಷ್ಟ್ರವ್ಯಾಪಿ ಚಳವಳಿ
ಸ್ಪೀಕರ್ ಸ್ಥಾನ ತ್ಯಜಿಸಲಾರೆ: ಚಟರ್ಜಿ
ರಿಯಾಯ್ತಿಗೆ ಭಾರತದಿಂದ ಎನ್‌ಎಸ್‌ಜಿ ಮನವೊಲಿಕೆ
ಮಾಯಾ ನೇತೃತ್ವದಲ್ಲಿ ಮಹತ್ವದ ಸಭೆ
ಮಾಜಿ ಯುಪಿ ಮುಖ್ಯ ಕಾರ್ಯದರ್ಶಿಗೆ ಸಿಬಿಐ ಸಮನ್ಸ್