ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿವಿ ಚಾನೆಲ್ ಟೇಪನ್ನು ಯಾಕೆ ಪ್ರಸಾರ ಮಾಡಿಲ್ಲ: ಆಡ್ವಾಣಿ  Search similar articles
ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ಖಾಸಗಿ ಟಿವಿ ಚಾನೆಲ್‌ವೊಂದು ಸ್ಟಿಂಗ್ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿದ್ದರೂ ಕೂಡ, ಆ ಟೇಪ್ ಅನ್ನು ಯಾಕೆ ಪ್ರಸಾರ ಮಾಡಿಲ್ಲ ಎಂದು ಭಾರತೀಯ ಜನತಾಪಕ್ಷದ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
PTIPTI

ಅಲ್ಲದೇ ಸಂಸತ್ ಒಳಗೆ ನಡೆದ ಈ ಲಂಚ ಪ್ರಕರಣದ ತನಿಖೆ ನಡೆಸುವಂತೆ ಸ್ಪೀಕರ್ ಅವರನ್ನು ಆಗ್ರಹಿಸಿದರು. ಅಣು ಒಪ್ಪಂದದ ವಿಚಾರದಲ್ಲಿ ಯುಪಿಎ ನಡೆದುಕೊಂಡ ರೀತಿ ದೇಶವೇ ತಲೆ ತಗ್ಗಿಸುವಂತಾಗಿದೆ. ಆ ನಿಟ್ಟಿನಲ್ಲಿ ಜು.22ರಂದು ಸಂಸತ್‌ನಲ್ಲಿ ನಡೆದ ಘಟನೆ ಇತಿಹಾಸದಲ್ಲಿನ 'ಕರಾಳ ದಿನ'ವಾಗಿದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ನನ್ನ 40ವರ್ಷಗಳ ರಾಜಕೀಯ ಜೀವನದಲ್ಲಿ ಸಂಸತ್‌ನಲ್ಲಿ ಇಂತಹ ಘಟನೆಯನ್ನು ಕಂಡಿರಲಿಲ್ಲ ಎಂದ ಅವರು, ಮತದಾನದ ವೇಳೆ ಗೈರುಹಾಜರಾಗುವಂತೆ ಲಂಚ ನೀಡಿದರೂ ಕೂಡ ಅದನ್ನು ಸ್ವೀಕರಿಸದೇ ನಿಷ್ಠೆ ಮೆರೆದ ಪಕ್ಷದ ಮೂವರು ಸಂಸದರನ್ನು ಅಭಿನಂದಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಮತ್ತಷ್ಟು
ಸಿಪಿಐ(ಎಂ)ನಿಂದ ಸ್ಪೀಕರ್ ಚಟರ್ಜಿ ಉಚ್ಚಾಟನೆ
ಪ್ರಧಾನಮಂತ್ರಿಯ ಘನತೆಯೆಲ್ಲಿ?: ಬೃಂದಾ ಪ್ರಶ್ನೆ
ಅಡ್ಡಮತ 'ದಾನಿ'ಗಳನ್ನು ಕಿತ್ತೆಸೆದ ಬಿಜೆಪಿ
ಭ್ರಷ್ಟಾಚಾರದಲ್ಲಿ ಭಾರತ ಮುಂದು
ಅಡ್ಡ ಮತ 'ದಾನಿ'ಗಳಿಗೆ ಕಷ್ಟ ಕಾಲ ಆರಂಭ
ಯುಪಿಎ ವಿರುದ್ಧ 'ವೈರಿ'ಗಳ ರಾಷ್ಟ್ರವ್ಯಾಪಿ ಚಳವಳಿ