ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಶ್ಚಾತ್ ಕಂಪನ: ಸಂಸದರು, ಸ್ಪೀಕರ್ ಉಚ್ಚಾಟನೆ  Search similar articles
ಉರುಳಬಹುದಾಗಿದ್ದ ಸರಕಾರವನ್ನು ಅಡ್ಡ ಮತ ಹಾಕಿ ಮತ್ತು ತಟಸ್ಥ ನಿಲುವು ತಳೆದು ರಕ್ಷಿಸಿದ ಸಂಸದರ ವಿರುದ್ಧ ಆಯಾ ಪಕ್ಷಗಳು ತೀಕ್ಷ್ಣ ಕ್ರಮ ಕೈಗೊಂಡಿದ್ದು, ಬಿಜೆಪಿ, ಜೆಡಿಎಸ್, ಟಿಡಿಪಿ, ಬಿಜೆಡಿ, ಅಕಾಲಿ ದಳ ಮುಂತಾದ ಪಕ್ಷಗಳು ತಮ್ಮ ತಮ್ಮ ಸಂಸದರನ್ನು ಉಚ್ಚಾಟಿಸಿದ್ದರೆ, 'ಅಶಿಸ್ತು' ಕಾರಣವೊಡ್ಡಿ ಹಿರಿಯ ಸಿಪಿಎಂ ಮುಖಂಡ, ಸ್ಪೀಕರ್ ಸೋಮನಾಥ ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಕರ್ನಾಟಕದಲ್ಲಿ ಯುಪಿಎ ಪರ ಮತ ಚಲಾಯಿಸಿದ ಜೆಡಿಎಸ್ ಸಂಸದ ಶಿವಣ್ಣ ಅವರನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಉಚ್ಚಾಟಿಸಿದ್ದಾರೆ. ಅಂತೆಯೇ ಬಿಜೆಪಿಯ ಮನೋರಮಾ ಮಧ್ವರಾಜ್, ಎಚ್.ಟಿ.ಸಾಂಗ್ಲಿಯಾನಾ, ಮಂಜುನಾಥ್ ಕುನ್ನೂರ್, ಬ್ರಿಜ್ ಭೂಷಣ್ ಶರಣ್ ಸಿಂಗ್, ಚಂದ್ರಭಾನು ಸಿಂಗ್, ಹರಿಭಾವ್ ಮಾಧವ್, ಬಾಬು ಭಾಯಿ ಕತಾರಾ ಮತ್ತು ಸೋಮಭಾಯಿ ಪಟೇಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಉಚ್ಚಾಟಿತರಾದ ಇತರ ಸಂಸದರೆಂದರೆ ಬಿಜು ಜನತಾ ದಳದ ಹರಿಹರ ಸ್ವೇನ್, ತೆಲುಗು ದೇಶಂನ ಎಂ.ಜಗನ್ನಾಥಮ್ ಕೂಡ ಇದೇ ಶಿಕ್ಷೆಗೆ ಗುರಿಯಾಗಿದ್ದರೆ, ಎಂಡಿಎಂಕೆಯ ಇಬ್ಬರು ಸಂಸದರಾದ ಎಲ್.ಗಣೇಶನ್ ಮತ್ತು ಜಿಂಜೀ ರಾಮಚಂದ್ರನ್ ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಅವರನ್ನು ಕೋರಲಾಗುತ್ತದೆ ಎಂದು ತಿಳದುಬಂದಿದೆ.

ಪ್ರತಿಪಕ್ಷಗಳಿಂದ ಒಟ್ಟು 24 ಸಂಸದರು ಅಡ್ಡಮತದಾನ ಮಾಡಿದ್ದರು ಇಲ್ಲವೇ ತಟಸ್ಥರಾಗಿ ಉಳಿದಿದ್ದರು ಇಲ್ಲವೇ ಗೈರು ಹಾಜರಾಗಿದ್ದರು. ಸರಕಾರವು 275 ಮತಗಳನ್ನು ಪಡೆದಿದ್ದರೆ ಪ್ರತಿಪಕ್ಷಗಳು 256 ಮತ ಸಂಪಾದಿಸಿದ್ದವು. 24 ಸಂಸದರು ಪಕ್ಷಗಳ ವಿಪ್ ಅನುಸಾರ ಮತದಾನ ಮಾಡಿದ್ದಿದ್ದರೆ, ಯುಪಿಎ ಸರಕಾರ ಉಳಿಯುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಆಡ್ವಾಣಿ ವಿಷಾದದಿಂದ ನುಡಿದಿದ್ದಾರೆ.
ಮತ್ತಷ್ಟು
ಜೆಡಿಎಸ್ ಸಂಸದ ಶಿವಣ್ಣ ಉಚ್ಚಾಟನೆ
ಟಿವಿ ಚಾನೆಲ್ ಟೇಪನ್ನು ಯಾಕೆ ಪ್ರಸಾರ ಮಾಡಿಲ್ಲ: ಆಡ್ವಾಣಿ
ಸಿಪಿಐ(ಎಂ)ನಿಂದ ಸ್ಪೀಕರ್ ಚಟರ್ಜಿ ಉಚ್ಚಾಟನೆ
ಪ್ರಧಾನಮಂತ್ರಿಯ ಘನತೆಯೆಲ್ಲಿ?: ಬೃಂದಾ ಪ್ರಶ್ನೆ
ಅಡ್ಡಮತ 'ದಾನಿ'ಗಳನ್ನು ಕಿತ್ತೆಸೆದ ಬಿಜೆಪಿ
ಭ್ರಷ್ಟಾಚಾರದಲ್ಲಿ ಭಾರತ ಮುಂದು