ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಟರ್ಜಿ ಬೆಂಬಲಕ್ಕೆ 'ಕೈ'  Search similar articles
PTI
ಬುಧವಾರ ಸಿಪಿಐ-ಎಂ ಪಕ್ಷದಿಂದ ಉಚ್ಚಾಟಿತರಾದ ಲೋಕಸಭಾ ಸಭಾಪತಿ ಸೋಮನಾಥ ಚಟರ್ಜಿಯವರ ಬೆಂಬಲಕ್ಕೆ ಕಾಂಗ್ರೆಸ್ ನಿಂತಿದೆ.

ಚಟರ್ಜಿ ಒಬ್ಬ ಅತ್ಯುತ್ತಮ ಸಭಾಪತಿಯಾಗಿದ್ದು, ಯಾರೇ ಆಗಲಿ ಅವರು ಸಭಾಪತಿಯಾಗಿ ಆಯ್ಕೆಯಾಗುತ್ತಲೇ ತಮ್ಮ ಪಕ್ಷದೊಂದಿಗಿನ ಸಂಬಂಧ ಕಡಿದುಕೊಳ್ಳುತ್ತಾರೆ ಮತ್ತು ಅವರು ಪಕ್ಷಾತೀತರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.

ಅವರು ಕೇವಲ ಕಾಂಗ್ರೆಸ್ ಪಕ್ಷದಿಂದ ಸಭಾಪತಿಯಾಗಿ ಆಯ್ಕೆಯಾಗಿಲ್ಲ ಅವರು ಯುಪಿಎ ಮತ್ತು ಸದನದ ಬೆಂಬಲವನನ್ನು ಪಡೆದಿದ್ದರು ಎಂದವರು ತಿಳಿಸಿದ್ದಾರೆ.

ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಹಿಂದೆಂದೂ ನಡೆಯದಂತಹ ಕ್ರಮ ಎಂದರಲ್ಲದೆ, ಇದು ಆ ಪಕ್ಷದ ಆಂತರಿಕ ವಿಷಯವಾಗಿರುವ ಕಾರಣ ಪ್ರತಿಕ್ರಿಯಿಸುವುದಿಲ್ಲ" ಎಂದವರು ಹೇಳಿದ್ದಾರೆ.

ಲೋಕಸಭೆಗೆ ಹೊಸ ಸಭಾಪತಿಯನ್ನು ಆರಿಸುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಉಚ್ಚಾಟನೆಯು ಅವರು ಸಭಾಪತಿಯಾಗಿ ಮುಂದುವರಿಯುವುದರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ನುಡಿದರು.
ಮತ್ತಷ್ಟು
ರಾಮನಿಂದಲೇ 'ರಾಮಸೇತು' ಧ್ವಂಸ: ಕೇಂದ್ರ ಪುನರುಚ್ಚಾರ
ಪಶ್ಚಾತ್ ಕಂಪನ: ಸಂಸದರು, ಸ್ಪೀಕರ್ ಉಚ್ಚಾಟನೆ
ಜೆಡಿಎಸ್ ಸಂಸದ ಶಿವಣ್ಣ ಉಚ್ಚಾಟನೆ
ಟಿವಿ ಚಾನೆಲ್ ಟೇಪನ್ನು ಯಾಕೆ ಪ್ರಸಾರ ಮಾಡಿಲ್ಲ: ಆಡ್ವಾಣಿ
ಸಿಪಿಐ(ಎಂ)ನಿಂದ ಸ್ಪೀಕರ್ ಚಟರ್ಜಿ ಉಚ್ಚಾಟನೆ
ಪ್ರಧಾನಮಂತ್ರಿಯ ಘನತೆಯೆಲ್ಲಿ?: ಬೃಂದಾ ಪ್ರಶ್ನೆ