ಮಂಗಳವಾರದ ಲೋಕಸಭೆಯಲ್ಲಿನ ಓಟಿಗಾಗಿ ನೋಟು ಪ್ರಹಸನವು ಸುದ್ದಿವಾಹಿನಿಗಳ ಟಿಆರ್‌ಪಿ ದರವನ್ನು ಏರಿಸಿವೆ.
ವಿಶ್ವಾಸಮತ ಯಾಚನೆಯ ಲೋಕಸಭಾ ವಿಶೇಷ ಅಧಿವೇಶನವು ನಾಟಕ, ಮನರಂಜನೆ, ಅನಿಶ್ಚಿತತೆ ಎಲ್ಲವನ್ನು ಒಳಗೊಂಡಿತ್ತು. ಲೋಕಸಭೆಯಲ್ಲಿನ ಆ ದಿನದ ಅಧಿವೇಶನವು ಮನರಂಜನೆಯನ್ನು ನೀಡುವುದರೊಂದಿಗೆ ಇಡೀ ದೇಶವೇ ದೂರದರ್ಶನ ವೀಕ್ಷಣೆಯಲ್ಲಿ ತೊಡಗುವಂತೆ ಮಾಡಿದ್ದು, ಇದರೊಂದಿಗೆ ಈ ನಾಟಕೀಯವು ಸುದ್ದಿ ಮಾಧ್ಯಮಗಳ ವೀಕ್ಷಕರ ಪ್ರಮಾಣವನ್ನೂ ಹೆಚ್ಚಿಸಿದೆ.
ಲೋಕಸಭೆಯಲ್ಲಿನ ಅಧಿವೇಶನದ ವೇಳೆ ಅನಿರೀಕ್ಷಿತವಾಗಿ ಬಿಜೆಪಿ ಸಂಸದರು ನೋಟುಗಳ ಕಂತೆಗಳನ್ನು ತಂದು ಪ್ರದರ್ಶಿಸಿದ ದೃಶ್ಯದ ಪ್ರಸಾರವು ಟಿವಿ ವೀಕ್ಷಕರ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದ್ದು, ರಾತ್ರಿ ಸುಮಾರು ಎಂಟು ಗಂಟೆಯವರೆಗೂ ಇದು ಮುಂದುವರಿದಿತ್ತು ಎಂದು ಎಮ್ಯಾಪ್‌ನ ಮುಖ್ಯಸ್ಥ ಜಿನಿತ್ ಶಾ ಹೇಳಿದ್ದಾರೆ.
ಕಳೆದ ಮಂಗಳವಾರಕ್ಕೆ ಹೋಲಿಸಿದರೆ, ಇಂಗ್ಲಿಷ್ ಸುದ್ದಿ ಮಾಧ್ಯಮಗಳ ವೀಕ್ಷಕರ ಸಂಖ್ಯೆಯಲ್ಲಿ ಶೇ.23ರಷ್ಟು ಹೆಚ್ಚಳ ಉಂಟಾಗಿದ್ದು, ಲೋಕಸಭೆಯಲ್ಲಿನ ಅಧಿವೇಶನವನ್ನು ಸುಮಾರು 12 ಮಿಲಿಯನ್ ಮಂದಿ ವೀಕ್ಷಿಸಿರುವುದಾಗಿ ಕಂಡುಬಂದಿದೆ.
ಹಿಂದಿ ಸುದ್ದಿ ಮಾಧ್ಯಮಗಳ ವೀಕ್ಷಕರ ಸಂಖ್ಯೆಯು ಶೇ.50ರಷ್ಟು ಏರಿಕೆಗೊಂಡಿದ್ದು, ಸುಮಾರು 24 ಮಿಲಿಯನ್ ಮಂದಿ ಹಿಂದಿ ಸುದ್ದಿ ಮಾಧ್ಯಮಗಳನ್ನು ವೀಕ್ಷಿಸಿದ್ದಾರೆ.
ಇದೇ ವೇಳೆ, ಸಿನಿಮಾ ಮಾಧ್ಯಮಗಳು ಮತ್ತು ವ್ಯವಹಾರ ಸುದ್ದಿ ಮಾಧ್ಯಮಗಳ ವೀಕ್ಷಣೆಯಲ್ಲಿ ಕ್ರಮವಾಗಿ ಶೇ.10 ಮತ್ತು 20ರಷ್ಟು ಇಳಿಕೆ ಉಂಟಾಗಿತ್ತು ಎಂದು ಎಮ್ಯಾಪ್ ತಿಳಿಸಿದೆ.
|