ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದ ಕ್ಷಿಪ್ರಗತಿಯ ಮುಂದುವರಿಕೆಗೆ ಯುಪಿಎ ಸಜ್ಜು  Search similar articles
PTI
ಹಲವು ದಿನಗಳ ರಾಜಕೀಯ ಬಿಕ್ಕಟ್ಟಿನ ನಂತರ ಕೊನೆಗೂ ಲೋಕಸಭೆಯಲ್ಲಿ ವಿಶ್ವಾಸಮತ ಗೆದ್ದಿರುವ ಯುಪಿಎ ಸರಕಾರವು, ಅಮೆರಿಕದೊಂದಿಗಿನ ತನ್ನ ಮಹತ್ವಾಕಾಂಕ್ಷಿ ಅಣು ಒಪ್ಪಂದವನ್ನು ಶೀಘ್ರಪಥದಲ್ಲೇ ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿದೆ.

ಅಣು ಒಪ್ಪಂದಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ವಿಯೆನ್ನಾದಲ್ಲಿ ಐಎಇಎ ರಾಷ್ಟ್ರಗಳ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ.

ಇದೇ ವೇಳೆ ಎನ್ಎಸ್‌ಜಿ ರಾಷ್ಟ್ರಗಳ ಬೆಂಬಲವನ್ನು ಪಡೆಯಲು ಪ್ರಯತ್ನಿಸುವ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಜರ್ಮನಿಗೆ ತೆರಳಿದ್ದು, ಅಮೆರಿಕಕ್ಕೆ ಭಾರತದ ರಾಯಭಾರಿ ರೋನನ್ ಸೇನ್ ಅಣು ಒಪ್ಪಂದದದ ಕುರಿತಾಗಿ ಮುಂದಿನ ಹೆಜ್ಜೆಯ ಬಗ್ಗೆ ಸರಕಾರಕ್ಕೆ ವಿವರಣೆ ನೀಡಲು ದೆಹಲಿಗೆ ಆಗಮಿಸಿದ್ದಾರೆ.

ಆಗಸ್ಟ್ ಪ್ರಾರಂಭದೊಳಗೆ ಐಎಇಎ ಮತ್ತು ಎನ್ಎಸ್‌ಜಿ ಸ್ಪಷ್ಟನೆಯನ್ನು ಪಡೆಯುವ ವಿಶ್ವಾಸವನ್ನು ಸರಕಾರವು ಹೊಂದಿದೆ.
ಮತ್ತಷ್ಟು
ವೀಕ್ಷಕರ ಪ್ರಮಾಣದ ಹೆಚ್ಚಿಸಿದ 'ಓಟಿಗಾಗಿ ನೋಟು' ದೃಶ್ಯ
ಚಟರ್ಜಿ ಬೆಂಬಲಕ್ಕೆ 'ಕೈ'
ರಾಮನಿಂದಲೇ 'ರಾಮಸೇತು' ಧ್ವಂಸ: ಕೇಂದ್ರ ಪುನರುಚ್ಚಾರ
ಪಶ್ಚಾತ್ ಕಂಪನ: ಸಂಸದರು, ಸ್ಪೀಕರ್ ಉಚ್ಚಾಟನೆ
ಜೆಡಿಎಸ್ ಸಂಸದ ಶಿವಣ್ಣ ಉಚ್ಚಾಟನೆ
ಟಿವಿ ಚಾನೆಲ್ ಟೇಪನ್ನು ಯಾಕೆ ಪ್ರಸಾರ ಮಾಡಿಲ್ಲ: ಆಡ್ವಾಣಿ