ಅಣು ಒಪ್ಪಂದದ ಕುರಿತಾಗಿ ವಿಶ್ವಾಸಮತ ಯಾಚನೆಯ ವೇಳೆ ಯುಪಿಎಗೆ ಬೆಂಬಲ ನೀಡುವಂತೆ ಸಚಿವ ಸ್ಥಾನದ ಆಮಿಷವೊಡ್ಡಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿಕೊಂಡಿದ್ದರೂ, ಮುಂದಿನ ತಿಂಗಳು ಪ್ರಧಾನಿಯವರು ಸಚಿವ ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆಯಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೋರೆನ್ ಈ ಕುರಿತಾಗಿ ಕಾಂಗ್ರೆಸ್‌ಗೆ ಒತ್ತಡ ಹೇರುತ್ತಿರುವುದರೊಂದಿಗೆ, ಸಂಪುಟ ವಿಸ್ತರಣೆಯು ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ನಡೆಯುವ ಸಾಧ್ಯತೆ ಇದೆ.
ಸೋರನ್ ಅವರ ಮರು ನೇಮಕ ಮತ್ತು ಅವರ ಪಕ್ಷದ ಸದಸ್ಯರೊಬ್ಬರಿಗೆ ರಾಜ್ಯದರ್ಜೆ ಸಚಿವ ಸ್ಥಾನ ನೀಡುವುದರೊಂದಿಗೆ, ಜಿ.ಕೆ.ವಾಸನ್ ಅವರಿಗೆ ಸಂಸತ್ತಿನಲ್ಲಿ ಸ್ಥಾನ ಹಾಗೂ ಖಾತೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ.
ಪ್ರಾರಂಭದಲ್ಲಿ ಸೋರೆನ್ ಅವರು ಅಣು ಒಪ್ಪಂದದ ಕುರಿತಾಗಿ ಕಾಂಗ್ರೆಸ್ ವಿರುದ್ಧವಾಗಿಯೇ ಇದ್ದರು. ನಂತರ ಸಂಪುಟ ದರ್ಜೆ ಸಚಿವ ಸ್ಥಾನದ ಆಮಿಷವನ್ನು ಒಡ್ಡುವ ಮೂಲಕ ಕಾಂಗ್ರೆಸ್ ಅವರನ್ನು ತನ್ನತ್ತ ಎಳೆದಿತ್ತು. ಆಮಿಷದ ಹೊರತಾಗಿ, ಕಾಂಗ್ರೆಸ್‌ಗೆ ಬೆಂಬಲ ನೀಡದಿದ್ದಲ್ಲಿ ಜೆಎಂಎಂನಲ್ಲಿ ಒಡಕು ಉಂಟಾಗಲಿದೆ ಎಂಬ ಬೆದರಿಕೆಯನ್ನೂ ಕಾಂಗ್ರೆಸ್ ನೀಡಿತ್ತು ಎನ್ನಲಾಗಿದೆ.
|