ಅಮರನಾಥ್ ದೇವಾಲಯಕ್ಕೆ ಭೂಮಿ ಹಸ್ತಾಂತರವನ್ನು ಸರಕಾರವು ರದ್ದುಗೊಳಿಸಿದ ನಿರ್ಧಾರದ ವಿರುದ್ಧದ ಪ್ರತಿಭಟನೆಯಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪರಿಣಾಮವಾಗಿ ಭುಗಿಲೆದ್ದ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಜಮ್ಮುವಿನಲ್ಲಿ ಗುರುವಾರ ಕರ್ಫ್ಯೂ ವಿಧಿಸಲಾಗಿದೆ.
ವಿಶಪ್ರಾಶನ ಮಾಡಿರುವ ಕುಲದೀಪ್ ಕುಮಾರ್ ದೋಗ್ರಾ ಎಂಬ ವ್ಯಕ್ತಿಯು, ಅಮರನಾಥ ದೇವಾಲಯದ ಭೂಮಿಯ ಹಸ್ತಾಂತರವನ್ನು ಸರಕಾರವು ರದ್ದುಗೊಳಿಸಿರುವುದರ ಬಗ್ಗೆ ತಾನು ತೀರಾ ಹತಾಶೆಗೊಂಡಿದ್ದು, ಈ ಕಾರಣಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡುತ್ತಿದ್ದೇನೆ ಎಂದು ಅಮರನಾಥ್ ಯಾತ್ರ ಸಂಘರ್ಷ ಸಮಿತಿಯ ಪ್ರತಿಭಟನೆಯ ವೇಳೆಗಿನ ತನ್ನ ಭಾವಪೂರ್ಣ ಭಾಷಣದಲ್ಲಿ ತಿಳಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭೂಮಿಯನ್ನು ಅಮರನಾಥ್ ದೇವಾಲಯಕ್ಕೆ ಹಿಂತಿರುಗಿಸುವವರೆಗೆ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಪ್ರತಿಭಟನಾಕಾರರು ನಿರಾಕರಿಸಿದ್ದು, ಇಂದು ಜಮ್ಮು ಬಂದ್‌ಗೆ ಕರೆ ನೀಡಲಾಗಿದೆ.
ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಮೃತವ್ಯಕ್ತಿಯ ದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಪೊಲೀಸರಿಗೆ ಅಡ್ಡಿಪಡಿಸಿದ್ದಾರೆ.
|