ಶ್ರೀನಗರದ ಬಾಟಾಮಾಲು ಬಸ್ ನಿಲ್ದಾಣದಲ್ಲಿ ಗುರುವಾರ ಉಂಟಾದ ಗ್ರೆನೇಡ್ ಸ್ಫೋಟದಲ್ಲಿ ಮೂರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಧ್ಯಾಹ್ನದ ಹೊತ್ತಲ್ಲಿ ಬಸ್ ನಿಲ್ದಾಣದಲ್ಲಿ ಜಮ್ಮುವಿಗೆ ತೆರಳಲು ನಿಂತಿದ್ದ ಬಸ್ ಪಕ್ಕ ಅನಾಮಿಕನೊಬ್ಬ ಗ್ರೆನೇಡ್ ಎಸೆದ ಫಲವಾಗಿ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.
ಇಬ್ಬರು ಗಾಯಾಳುಗಳನ್ನು ಕುಶುಬೂ ಮತ್ತು ಅದಿಲ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಮಹಿಳೆ ಯಾರೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ದಾಳಿಗೆ ಯಾವುದೇ ಉಗ್ರಗಾಮಿ ಸಮೂಹವು ಹೊಣೆ ಹೊತ್ತುಕೊಂಡಿಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.
|