ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಂಚದ ಆಮಿಷ: ದೂರು ನೀಡಲು ಸಂಸತ್ ಸೂಚನೆ  Search similar articles
ವಿಶ್ವಾಸಮತದ ವೇಳೆ ತಟಸ್ಥವಾಗಿರುವಂತೆ ತಮಗೆ ಮೂರು ಕೋಟಿ ರೂಪಾಯಿಗಳ ಆಮಿಷವೊಡ್ಡಲಾಗಿದೆ ಎಂಬುದಾಗಿ ಆರೋಪ ಮಾಡಿರುವ ಬಿಜೆಪಿಯ ಮೂರು ಸಂಸದರಿಗೆ ಅಧಿಕೃತವಾಗಿ ದೂರು ನೀಡುವಂತೆ ಲೋಕಸಭಾ ಕಾರ್ಯಾಲಯವು ಸೂಚನೆ ನೀಡಿದೆ.

ಈ ಪ್ರಕರಣದಲ್ಲಿ ಮುಂದುವರಿಯುವಂತಾಗಲು ತಮ್ಮ ಅಭಿಪ್ರಾಯವನ್ನು ಅಧಿಕೃತವಾಗಿ ಸಲ್ಲಿಸುವಂತೆ ಬಿಜೆಪಿಯ ಮೂರು ಸಂಸದರಾದ ಅಶೋಕ್ ಅರ್ಗಲ್, ಮಹಾವೀರ್ ಬಗೋರಾ ಮತ್ತು ಫಗನ್ ಸಿಂಗ್ ಕುಲಸ್ತೆ ಅವರಿಗೆ ನೀಡಿರುವ ಪತ್ರದಲ್ಲಿ ಹೇಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆಯ ಮುನ್ನ ಅಣು ಒಪ್ಪಂದದ ಕುರಿತು ನಡೆಯುತ್ತಿದ್ದ ಚರ್ಚೆ ಸಂದರ್ಭದಲ್ಲಿ, ಸಮಾಜವಾದಿ ಪಕ್ಷವು ವಿಶ್ವಾಸಮತದಲ್ಲಿ ತಟಸ್ಥವಾಗಿ ರುವಂತೆ ತಮಗೆ ಮೂರು ಕೋಟಿ ರೂಪಾಯಿಗಳ ಆಮಿಷವೊಡ್ಡಿದೆ ಎಂದು ನೋಟಿನ ಕಂತೆಯ ಸಹಿತ ಮೂರು ಬಿಜೆಪಿ ಸಂಸದರು ಸದನದ ಮುಂಭಾಗಕ್ಕೆ ಧಾವಿಸಿದ್ದು, ಈ ರಾದ್ಧಾಂತಕ್ಕೆ ಕಾರಣವಾಗಿತ್ತು.

ವಿಶ್ವಾಸಮತದ ಕುರಿತಾದ ಈ ಲಂಚ ಪ್ರಕರಣದಿಂದ ಯಾರೊಬ್ಬರೂ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಸ್ಪೀಕರ್ ಸೋಮನಾಥ್ ಚಟರ್ಜಿ ಸ್ಪಷ್ಟಪಡಿಸಿದ್ದರು. ಅಲ್ಲದೆ, ಇದೊಂದು ದುರದೃಷ್ಟಕರ ಮತ್ತು ಈ ಘಟನೆಯು ಸಂಸತ್ತಿನಲ್ಲಿ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ ಎಂಬುದಾಗಿ ಬಣ್ಣಿಸಿದ್ದರು.
ಮತ್ತಷ್ಟು
ಉಚ್ಚಾಟನೆ ಅನಿವಾರ್ಯವಾಗಿತ್ತು: ಪ್ರಕಾಶ್ ಕಾರಟ್
ಶ್ರೀನಗರ: ಗ್ರೆನೇಡ್ ಸ್ಫೋಟಕ್ಕೆ 3 ಮಕ್ಕಳ ಸಹಿತ 5 ಬಲಿ
ಪ್ರಜಾ ದೇಗುಲ ಅಪವಿತ್ರಗೊಳಿಸಿದ ಬಿಜೆಪಿ: ಕಾಂಗ್ರೆಸ್
ಸ್ಪೀಕರ್ ಬೆಂಬಲಕ್ಕೆ ಯುಪಿಎ: ಸಿಂಗ್ ಭರವಸೆ
ಅಮರನಾಥ: ಪ್ರತಿಭಟನಾಕಾರ ಆತ್ಮಹತ್ಯೆ, ಕರ್ಫ್ಯೂ
ಪ್ರಧಾನಮಂತ್ರಿಯಿಂದ ಶೀಘ್ರದಲ್ಲೇ ಸಂಪುಟ ವಿಸ್ತರಣೆ ನಿರೀಕ್ಷೆ