ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಜಿಯಾಬಾದ್ ಕೋಮು ಸಂಘರ್ಷ: 3 ಸಾವು  Search similar articles
ಗಜಿಯಾಬಾದ್‌ನ ಲೋನಿ ಎಂಬಲ್ಲಿ ಅಲ್ಪಸಂಖ್ಯಾತ ಸಮುದಾಯ ಪ್ರಾಬಲ್ಯವುಳ್ಳ ಪ್ರದೇಶದಲ್ಲಿನ ಮನೆ ನಿರ್ಮಾಣ ಕುರಿತಂತೆ ಗುರುವಾರ ರಾತ್ರಿ ಎರಡು ಕೋಮಿನ ನಡುವೆ ಉಂಟಾದ ಸಂಘರ್ಷದಲ್ಲಿ ಮೂರು ಜನರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ.

ಎರಡೂ ಗುಂಪಿನವರು ಗುಂಡುದಾಳಿ ಹಾಗೂ ಬೆಂಕಿಯಿಟ್ಟ ಪರಿಣಾಮವಾಗಿ ಮೂರು ಉತ್ತರ ಪ್ರದೇಶ ರೋಡ್‌ವೇ ಬಸ್‌ಗಳು ಸೇರಿದಂತೆ ಅನೇಕ ವಾಹನಗಳಿಗೆ ಹಾನಿಯಾಗಿದ್ದು, ಒಂದು ಪೊಲೀಸ್ ಜೀಪನ್ನು ಸುಟ್ಟುಹಾಕಲಾಗಿದೆ ಎಂದು ಎಸ್ಎಸ್‌ಪಿ ದೀಪಕ್ ರತನ್ ತಿಳಿಸಿದ್ದಾರೆ.

ಹರಿದ್ವಾರಕ್ಕೆ ತೆರಳುತ್ತಿದ್ದ ಶಿವ ಭಕ್ತರೊಂದಿಗೆ ಸೇರಿಕೊಂಡ ಪ್ರತಿಭಟನಾಕಾರರು ಪ್ರದೇಶದಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆತಡೆ ನಡೆಸಿದರು.

ಕುಟುಂಬವೊಂದು ಇತ್ತೀಚೆಗೆ ಖರೀದಿ ಮಾಡಿದ್ದ ಮನೆಯೊಂದನ್ನು ಮರು ನಿರ್ಮಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ನಿರ್ಮಾಣಕ್ಕೆ ವಿರೋಧ ಪಂಗಡದ ಸದಸ್ಯರೊಬ್ಬರ ವಿರೋಧವಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದರೂ, ನಿಯಂತ್ರಣದಲ್ಲಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಎಸ್ಎಸ್‌ಪಿ ತಿಳಿಸಿದ್ದಾರೆ.
ಮತ್ತಷ್ಟು
ಒಪ್ಪಂದ: ಸಿಂಗ್ ಬುಷ್ ದೂರವಾಣಿ ಮಾತುಕತೆ
ಮ.ಪ್ರ ಚುನಾವಣೆ: ಎಸ್ಪಿ, ಕಾಂಗ್ರೆಸ್ ಮೈತ್ರಿ ಸಾಧ್ಯತೆ
ತಾಜ್‌‌ಮಹಲ್‌‌ನಲ್ಲಿ ಶಿವಸೈನಿಕರ ಪೂಜೆ - ಬಂಧನ
ವಿಪ್ ಉಲ್ಲಂಘನೆ: ಜೆಡಿ(ಯು), ಎಂಡಿಎಂಕೆ ಸಂಸದರ ಉಚ್ಚಾಟನೆ
ಲಂಚದ ಆಮಿಷ: ದೂರು ನೀಡಲು ಸಂಸತ್ ಸೂಚನೆ
ಉಚ್ಚಾಟನೆ ಅನಿವಾರ್ಯವಾಗಿತ್ತು: ಪ್ರಕಾಶ್ ಕಾರಟ್