ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
80ರ ಹರೆಯಕ್ಕೆ ಕಾಲಿಟ್ಟ ಸೋಮನಾಥ ಚಟರ್ಜಿ  Search similar articles
PTI
ಎರಡು ದಿನಗಳ ಹಿಂದೆ ತನ್ನ ಪಕ್ಷದಿಂದ ಉಚ್ಚಾಟನೆಗೀಡಾಗಿರುವ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಶುಕ್ರವಾರ 80ರ ಹರೆಯಕ್ಕೆ ಕಾಲಿರಿಸಿದ್ದಾರೆ.

ಸ್ಪೀಕರ್ ಅವರ, ನಂ.20, ಅಕ್ಬರ್ ರಸ್ತೆಯಲ್ಲಿರುವ ನಿವಾಸಕ್ಕೆ ತನ್ನ ಅಧಿಕಾರಿಯೊಬ್ಬರನ್ನು ಕಳುಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಚಟರ್ಜಿಯವರಿಗೆ ಹೂಗುಚ್ಛದೊಂದಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಸ್ಪೀಕರ್‌ರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸೋಮನಾಥ ಚಟರ್ಜಿಯವರು ಅಸ್ಸಾಮಿನ ತೇಜ್‌ಪುರದಲ್ಲಿ 1929ರ ಜುಲೈ 25ರಂದು ಜನಿಸಿದ್ದರು. ಅವರು ಕೋಲ್ಕತಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ, ಕೇಂಬ್ರಿಜ್‌‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಯಿಪಿಎಗೆ ಎಡಪಕ್ಷಗಳು ನೀಡಿರುವ ಬೆಂಬಲ ಹಿಂತೆಗೆದ ಬಳಿಕ ಚಟರ್ಜಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಪಿಐ-ಎಂ ಅವರನ್ನು ಒತ್ತಾಯಿಸಿದ್ದು. ಆದರೆ ತನ್ನ ಪಕ್ಷವು ರಾಜಕೀಯಾತಿತ ಎಂದಿದ್ದ ಚಟರ್ಜಿ ಸ್ಪೀಕರ್ ಆಗಿ ಮುಂದುವರಿಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡಿರುವ ಪಾಲಿಟ್‌ಬ್ಯೂರೋ, ಅವರನ್ನು ಬುಧವಾರ ಪಕ್ಷದಿಂದ ಉಚ್ಚಾಟಿಸಿತ್ತು
ಮತ್ತಷ್ಟು
ಎಡಪಕ್ಷಗಳೊಂದಿಗೆ ವೈಮನಸ್ಸಿಲ್ಲ: ಮುಖರ್ಜಿ
ಗಜಿಯಾಬಾದ್ ಕೋಮು ಸಂಘರ್ಷ: 3 ಸಾವು
ಒಪ್ಪಂದ: ಸಿಂಗ್ ಬುಷ್ ದೂರವಾಣಿ ಮಾತುಕತೆ
ಮ.ಪ್ರ ಚುನಾವಣೆ: ಎಸ್ಪಿ, ಕಾಂಗ್ರೆಸ್ ಮೈತ್ರಿ ಸಾಧ್ಯತೆ
ತಾಜ್‌‌ಮಹಲ್‌‌ನಲ್ಲಿ ಶಿವಸೈನಿಕರ ಪೂಜೆ - ಬಂಧನ
ವಿಪ್ ಉಲ್ಲಂಘನೆ: ಜೆಡಿ(ಯು), ಎಂಡಿಎಂಕೆ ಸಂಸದರ ಉಚ್ಚಾಟನೆ