ಜಮ್ಮುವಿನಲ್ಲಿ ಗುರುವಾರ ವಿಧಿಸಿದ್ದ ಕರ್ಫ್ಯೂವನ್ನು ಶುಕ್ರವಾರ ಹಿಂತೆಗೆದುಕೊಳ್ಳಲಾಗಿದ್ದು, ಜಮ್ಮು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಆದರೆ, ನಿನ್ನೆ ಕರೆಯಲಾಗಿದ್ದ ಜಮ್ಮು ಬಂದ್‌ನ್ನು ರವಿವಾರದವರೆಗೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂ ವಿವಾದದ ಕುರಿತಾಗಿ ಇನ್ನೂ ಪ್ರತಿಭಟನೆ ನಡೆಸುತ್ತಲೇ ಇರುವ ಅಮರನಾಥ್ ಯಾತ್ರ ಸಂಘರ್ಷ ಸಮಿತಿಯು ಬಂದ್‌ಗೆ ಕರೆ ನೀಡಿತ್ತು.
ಅಮರನಾಥ್ ದೇವಾಲಯಕ್ಕೆ ಭೂಮಿ ಹಸ್ತಾಂತರವನ್ನು ರದ್ದುಗೊಳಿಸುವ ಸರಕಾರದ ನಿರ್ಧಾರದ ನಂತರ ಪ್ರತಿಭಟನಾ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಜಮ್ಮುವಿನಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು.
ಜಮ್ಮುವಿನ ಸಾರ್ವಜನಿಕ ಪ್ರತಿಭಟನೆಯಲ್ಲಿ ದೇಶಭಕ್ತಿಗೀತೆಯೊಂದನ್ನು ಹಾಡಿದ ನಂತರ, ಕುಲದೀಪ್ ಕುಮಾರ್ ದೋಗ್ರಾ ಎಂಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಮಾರು 24 ಗಂಟೆಗಳ ನಂತರ, ಕುಲದೀಪ್ ಅವರ ಗ್ರಾಮ ಬಿಶ್ನಾದಲ್ಲಿ ಕುಲದೀಪ್ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
|