ವಿಶ್ವಾಸಮತದ ವೇಳೆ ತಟಸ್ಥವಾಗಿರುವಂತೆ ಸಮಾಜವಾದಿ ಪಕ್ಷವು ತಮಗೆ ಹಣದ ಆಮಿಷವೊಡ್ಡಿರುವುದಾಗಿ ಲೋಕಸಭೆಯಲ್ಲಿ ಆರೋಪಿಸಿದ್ದ ಮೂವರು ಬಿಜೆಪಿ ಸಂಸದರು, ಲೋಕಸಭೆಯ ಆದೇಶದಂತೆ ಈ ಕುರಿತಾಗಿ ಅಧಿಕೃತ ದೂರು ಸಲ್ಲಿಸಿದ್ದು, ದೂರಿನಲ್ಲಿ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಹೆಸರನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ.
ಲೋಕಸಭಾ ಕಾರ್ಯಾಯಲಕ್ಕೆ ಸಲ್ಲಿಸಲಾದ ದೂರಿನಲ್ಲಿ ಯಾವುದೇ ಸಮಾಜವಾದಿ ಸದಸ್ಯರ ಹೆಸರನ್ನು ಸೂಚಿಸಲಾಗಿದೆಯೇ ಎಂಬ ದೃಢಪಡಿಸುವ ಪ್ರಶ್ನೆಗೆ ಮೂರು ಸಂಸದರಾದ ಅಶೋಕ್ ಅರ್ಗಲ್, ಮಹಾವೀರ್ ಭಗೋರಾ ಮತ್ತು ಫಾಗನ್ ಸಿಂಗ್ ಉತ್ತರಿಸಿದ್ದಾರೆ.
ಲೋಕಸಭಾ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಅವರಿಗೆ ಈ ದೂರನ್ನು ಸಲ್ಲಿಸಲಾಗಿದ್ದು, ದೂರು ಸಲ್ಲಿಸುವ ಲೇಳೆ ವಿ.ಕೆ.ಮಲ್ಹೋತ್ರಾ ಮತ್ತು ರವಿಶಂಕರ್ ಪ್ರಸಾದ್ ಅವರೂ ಉಪಸ್ಥಿತರಿದ್ದರು.
ಅದಾಗ್ಯೂ, ದೂರಿನಲ್ಲಿರುವ ವಿಷಯವನ್ನು ಬಹಿರಂಗಗೊಳಿಸಲು ಮಲ್ಹೋತ್ರಾ ನಿರಾಕರಿಸಿದ್ದಾರೆ.
|