ಭಾರತ ಅಮೆರಿಕ ಪರಮಾಣು ಒಪ್ಪಂದವು ಉಪಖಂಡದಲ್ಲಿ ಅಣ್ವಸ್ತ್ರ ಪೈಪೋಟಿಯನ್ನು ವರ್ಧಿಸುತ್ತದೆ ಎಂಬ ಪಾಕಿಸ್ತಾನದ ಎಚ್ಚರಿಕೆಯನ್ನು ಭಾರತವು ತಳ್ಳಿಹಾಕಿದ್ದು, ಅಣ್ವಸ್ತ್ರಗಳಿಗೆ ಅವಕಾಶವೇ ಇರುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.
ಈ ಒಪ್ಪಂದವು ಸಂಪೂರ್ಣವಾಗಿ ನಾಗರಿಕ ಹಿತಕ್ಕಾಗಿದ್ದು, ಸೇನಾ ಪರಿಣಾಮಗಳನ್ನು ಹೊಂದಿಲ್ಲ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ.
ಈ ಒಪ್ಪಂದವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ನಾಗರಿಕ ಪರಮಾಣು ಸಹಕಾರ ಒಪ್ಪಂದವಾಗಿದ್ದು, ಇಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಮುಖರ್ಜಿ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.
|