ದೇಶದ ಪ್ರಮುಖ ಐಟಿ ಹಾಗೂ ವಾಣಿಜ್ಯ ಕೇಂದ್ರಿತ ನಗರ ಪ್ರದೇಶಗಳ ಮೇಲೆ ಭಯೋತ್ಪಾಕರ ದಾಳಿಯ ಅಟ್ಟಹಾಸ ಮುಂದುವರಿದಿದ್ದು,ಕೇಂದ್ರ ಮತ್ತು ರಾಜ್ಯ ಗುಪ್ತ ಚರ ಇಲಾಖೆಗಳು ದಾಳಿ ನಡೆಯುತ್ತದೆ ಎಂಬ ಮುನ್ಸೂಚನೆಯನ್ನು ಪಡೆದುಕೊಂಡರೂ ಸಹ ಯಾವುದೇ ದಾಳಿಯನ್ನು ಸಮರ್ಥವಾಗಿ ವಿಫಲಗೊಳಿಸಲು ಸಾಧ್ಯವಾಗಿಲ್ಲ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಪ್ರಮುಖ 12 ಬಾಂಬ್ ಸ್ಫೋಟದ ವಿವರ.
2003 ಮಾರ್ಚ್ 13ರಂದು ಮುಂಬೈ ರೈಲಿನಲ್ಲಿ ಬಾಂಬ್ ಸ್ಫೋಟ - 11ಸಾವು
2003 ಆಗೋಸ್ಟ್ 25ರಂದು ಮುಂಬೈಯಲ್ಲಿ ಕಾರ್ ಬಾಂಬ್ ಸ್ಫೋಟ - 60 ಬಲಿ
2004 ಆಗೋಸ್ಟ್ 15 ಅಸ್ಸಾಂನಲ್ಲಿ ಬಾಂಬ್ ಸ್ಫೋಟ 16 ಸಾವು
2005 ಅಕ್ಟೋಬರ್ 29 ನವದೆಹಲಿಯಲ್ಲಿ ಮೂರು ಬಾಂಬ್ ಸ್ಫೋಟ - 66 ಬಲಿ
2006 ಮಾರ್ಚ್ 7 ವಾರಾಣಾಸಿಯಲ್ಲಿ ಮೂರು ಸ್ಫೋಟ - 15 ಸಾವು
2006 ಜುಲೈ 11 ಮುಂಬೈ ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಸರಣಿ ಬಾಂಬ್ ಸ್ಫೋಟ- 180 ಬಲಿ
2006 ಸೆಪ್ಟೆಂಬರ್ 8 ಮುಂಬೈ ಸಮೀಪದ ಮಾಲ್‌ಗಾಂವ್‌ನಲ್ಲಿ ಸರಣಿ ಸ್ಫೋಟ- 32 ಸಾವು.
2007 ಫೆಬ್ರುವರಿ 19 ಭಾರತದಿಂದ ಪಾಕ್‌ಗೆ ತೆರಳುತ್ತಿದ್ದ ರೈಲಿನಲ್ಲಿ ಬಾಂಬ್ ಸ್ಫೋಟ - 66 ಬಲಿ
2007 ಮೇ 17 ಹೈದರಾಬಾದ್ ಮಸೀದಿಯಲ್ಲಿ ಬಾಂಬ್ ಸ್ಫೋಟ-11ಸಾವು
2007 ಆಗೋಸ್ಟ್ 25 ಹೈದರಾಬಾದ್‌ನಲ್ಲಿ ಮೂರು ಸ್ಫೋಟ- 40 ಬಲಿ
2008 ಮೇ 13 ಜೈಪುರದಲ್ಲಿ ಏಳು ಬಾಂಬ್ ಸ್ಫೋಟ - 63 ಸಾವು
2008 ಜುಲೈ 25 ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ 3 ಬಲಿ
|