ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇತು ಧ್ವಂಸ ಸಿದ್ಧಾಂತ: ವಿದ್ವಾಂಸರಲ್ಲಿ ಮತಭೇದ  Search similar articles
ಸೇತುಸಮುದ್ರಂ ಯೋಜನೆ ಕುರಿತಂತೆ ರಾಮಸೇತುವನ್ನು ಶ್ರೀರಾಮನೇ ಧ್ವಂಸ ಮಾಡಿದ್ದಾನೆ ಎಂದು ಕಂಬ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ಕೇಂದ್ರ ಸರಕಾರವು ವರಿಷ್ಠ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರೂ, ತಮಿಳು ವಿದ್ವಾಂಸರು ಈ ವಾದದ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಕಂಬ ರಾಮಾಯಣವು ಸಾವಿರಾರು ಆವೃತ್ತಿಗಳಲ್ಲಿ ಬಂದಿದ್ದು, ಅಸಂಖ್ಯ ವ್ಯಾಖ್ಯಾನಗಳನ್ನು ಇದು ಹೊಂದಿದೆ. ಯುದ್ಧ ಕಾಂಡದ ಎರಡನೇ ಭಾಗದಲ್ಲಿನ ಮೂರನೇ ಪ್ಯಾರಾದಲ್ಲಿ ಲಂಕಾದಿಂದ ಸೀತೆಯನ್ನು ಬಿಡಿಸಿಕೊಂಡು ಪುಷ್ಪಕವಿಮಾನದಲ್ಲಿ ಹಿಂದೆ ಬರುವಾಗ ರಾಮಸೇತುವನ್ನು ರಾಮನು ಸೀತೆಗೆ ತೋರಿಸುವ ಹಾಗೂ ಇದರ ನಿರ್ಮಾಣದ ಕುರಿತು ವಿವರಣೆಯನ್ನು ನೀಡುವ ಬಗ್ಗೆ ಕಂಬ ರಾಮಾಯಣದಲ್ಲಿ ವಿವರಿಸಲಾಗಿದೆ.

ವಿ.ಎಂ.ಗೋಪಾಲಕೃಷ್ಣಮಾಚಾರ್ಯರ್ ಅವರ 171ನೇ ಪ್ರಕಟಣೆಯಲ್ಲಿರುವ ಶ್ಲೋಕವನ್ನು ಭಾಷಾಂತರಿಸಿದಾಗ, ಹಡಗುಗಳು ಸಾಗಲು ಸಹಾಯವಾಗುವಂತೆ ರಾಮಸೇತುವಿನ ಒಂದು ಭಾಗದಲ್ಲಿ ಒಂದು ಪಥವನ್ನಷ್ಟೇ ಶ್ರೀರಾಮ ನಿರ್ಮಿಸಿದ್ದು, ಇದು 21 ಜನ್ಮಗಳ ಪಾಪವನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ ಮತ್ತು ಮೋಕ್ಷ ಮಾರ್ಗದತ್ತ ಒಯ್ಯುತ್ತದೆ ಎಂಬ ಅರ್ಥ ಬರುತ್ತದೆ.

ಈ ಉಲ್ಲೇಖವನ್ನು ರಾಮನೇ ರಾಮಸೇತುವನ್ನು ಒಡೆದ ಎಂಬ ಕೇಂದ್ರದ ವಾದಕ್ಕೆ ಭಾಗಶಃ ಪೂರಕವಾಗಿ ವ್ಯಾಖ್ಯಾನಿಸಬಹುದಾದರೂ, ಇದು ರಾಮನೇ ರಾಮಸೇತುವನ್ನು ಧ್ವಂಸಮಾಡಿದ ಎಂಬ ವಾದವನ್ನು ಪುಷ್ಟೀಕರಿಸುವುದಿಲ್ಲ ಎನ್ನುತ್ತಾರೆ ತಮಿಳು ಧಾರ್ಮಿಕ ಪಠ್ಯ ತಜ್ಞ ಟಿ.ಜ್ಞಾನಸುಂದರಂ.

ಜ್ಞಾನಸುಂದರಂ ಅವರ ಪ್ರಕಾರ, ಈ ಉಲ್ಲೇಖವಿರುವ ಶ್ಲೋಕವು ಮೂಲಗ್ರಂಥದಲ್ಲಿ ಇಲ್ಲ. ಆದರೆ, ಇದು ಮಿಗೈಪ್ಪಾಡಲ್‌ಗಳ್ 1ರ ಭಾಗವಾಗಿದೆ. ಮಿಗೈಪ್ಪಾಡಲ್‌ಗಲ್ ದೃಢೀಕೃತ ಗ್ರಂಥವಲ್ಲ ಎಂಬುದಾಗಿ ತಮಿಳು ಮ್ಯಾಗಜಿನ್ ಅಮುಧಾ ಸುರಭಿಯ ಸಂಪಾದಕ ತಿರುಪ್ಪೂರ್ ಕೃಷ್ಣನ್ ವಾದಿಸುತ್ತಾರೆ. ಇದಲ್ಲದೆ, ಇಂತಹ ಅದೆಷ್ಟೋ ಶ್ಲೋಕಗಳನ್ನು ಟಿ.ಕೆ.ಚಿದಂಬರನಾಥ ಮುದಲಿಯಾರ್ ಮುಂತಾದ ಕಂಬ ರಾಮಾಯಣ ತಜ್ಞರು ಕೂಡಾ ಇದು ದೃಢೀಕೃತವಲ್ಲ ಎಂದೇ ತಳ್ಳಿಹಾಕಿದ್ದಾರೆ. ಮೂಲಗ್ರಂಥದೊಂದಿಗೆ ಹೋಲಿಸಿದಾಗ, ರಾಮಸೇತುವಿನ ಮೂಲಕ ಪಥವೊಂದನ್ನು ನಿರ್ಮಿಸಲಾಯಿತು ಎಂಬ ಉಲ್ಲೇಖವಿದೆಯೇ ಹೊರತು, ರಾಮಸೇತು ಧ್ವಂಸದ ಬಗ್ಗೆ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ರಾಮಾಯಣವು ನೂರಾರು ರೀತಿಯ ವ್ಯಾಖ್ಯಾನಗಳೊಂದಿಗೆ, ಪ್ರಾದೇಶಿಕ ಪರಂಪರೆಗೆ ತಕ್ಕಂತೆ ಹಲವಾರು ಆವೃತ್ತಿಗಳನ್ನೂ ಕಂಡಿದೆ. ಕಂಬ ತಮಿಳು ಗ್ರಂಥವು ಅನೇಕ ಆವೃತ್ತಿಗಳನ್ನು ಹೊಂದಿದ್ದರೂ, ಮೂಲ ತಾಳೆಗರಿಯ ಗ್ರಂಥದಿಂದ ಅನೇಕ ವಿದ್ವಾಂಸರು ತಮಗೆ ಅರ್ಥವಾದ ರೀತಿಯಲ್ಲಿ ಭಿನ್ನಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅತ್ಯಂತ ದೃಢೀಕೃತ ಆವೃತ್ತಿಯ ಸುಮಾರು 24000 ಶ್ಲೋಕಗಳನ್ನು ಹೊಂದಿರುವ ವಾಲ್ಮೀಕಿ ರಾಮಾಯಣವನ್ನು ಆಧರಿಸಿಯೇ ಕಂಬ ರಾಮಾಯಣ ಗ್ರಂಥವನ್ನು ರಚಿಸಲಾಗಿದ್ದರೂ, ತಮಿಳು ಸಂಪ್ರದಾಯ ಮತ್ತು ಪದ್ಧತಿಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ತುಲಸೀದಾಸ್ ಮತ್ತು ಕಂಬ ಇಬ್ಬರೂ ತಮ್ಮ ಗ್ರಂಥದಲ್ಲಿ ಪ್ರಾದೇಶಿಕ ಸಂಪ್ರದಾಯಕ್ಕನುಗುಣವಾಗಿ ಬದಲಾವಣೆಯನ್ನು ಮಾಡಿದ್ದಾರೆ ಎಂದು ರಾಮಾಯಣ ಕುರಿತ ತಮ್ಮ ಗ್ರಂಥದ ಉಪಸಂಹಾರವೊಂದರಲ್ಲಿ ಖ್ಯಾತ ವಿದ್ವಾಂಸ ಸಿ.ಆರ್.ಗೋಪಾಲಾಚಾರಿ ಹೇಳಿದ್ದಾರೆ.

ವಾಸ್ತವವಾಗಿ, ಸೀತೆಯನ್ನು ಅಪಹರಿಸುವಾಗ ರಾವಣನು ಬಲಾತ್ಕಾರವಾಗಿ ಸೀತೆಯನ್ನು ಎಳೆದೊಯ್ದನೆಂದು ವಾಲ್ಮೀಕಿ ರಾಮಾಯಣವು ಹೇಳಿದರೆ, ರಾವಣನು ಆಕೆಯನ್ನು ಸ್ಪರ್ಶಿಸಿಲ್ಲ ಎಂಬುದಾಗಿ ಕಂಬ ಉಲ್ಲೇಖಿಸಿದ್ದಾರೆ. ಸೀತೆಯನ್ನು ಸ್ಪರ್ಶಿಸಲು ಬಯಸದ ರಾವಣನು ಸೀತೆ ನಿಂತುಕೊಂಡಿರುವ ಭೂಭಾಗವನ್ನೇ ಎತ್ತಿಕೊಂಡಿದ್ದ ಎಂಬುದಾಗಿ ಕಂಬ ಸೀತಾಪಹರಣವನ್ನು ವಿವರಿಸಿದ್ದಾರೆ.
ಮತ್ತಷ್ಟು
ಅಣು ಒಪ್ಪಂದ ಭಾರತಕ್ಕೆ ಅಗತ್ಯವಾಗಿದೆ: ಕಲಾಂ
ದೇಶವನ್ನು ತಲ್ಲಣಿಸಿದ ಪ್ರಮುಖ 12 ಬಾಂಬ್ ಸ್ಫೋಟ
ಸರಣಿ ಸ್ಫೋಟ - ವ್ಯವಸ್ಥಿತ ಸಂಚು: ಯಡಿಯೂರಪ್ಪ
ಅಣು ಒಪ್ಪಂದ: ಪಾಕ್ ಎಚ್ಚರಿಕೆಯನ್ನು ತಳ್ಳಿ ಹಾಕಿದ ಭಾರತ
ಹಣದ ಆಮಿಷ: ಅಧಿಕೃತ ದೂರು ಸಲ್ಲಿಕೆ
ಜಮ್ಮು: ಕರ್ಫ್ಯೂ ಹಿಂದಕ್ಕೆ, ಬಂದ್ ಮುಂದುವರಿಕೆ