ಸಂಸತ್ತಿನ ಓಟಿಗಾಗಿ ನೋಟು ಪ್ರಕರಣದಲ್ಲಿ ಸ್ಪೀಕರ್ ಕಾರ್ಯಾಲಯವು ಭಾಗಿಯಾಗಿದೆ ಎಂದು ತಾವು ಹೇಳಿರುವುದಾಗಿ ಪ್ರಕಟವಾಗಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಸ್ಪಷ್ಟಪಡಿಸಿದ್ದಾರೆ. 'ನಾನು ಹೇಳಿರುವ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿಹೇಳಲಾಗಿದೆ' ಎಂದು ಯೆಚೂರಿ ತಿಳಿಸಿದ್ದಾರೆ.
ಸಂಸದರಿಗೆ ಆಮಿಷವೊಡ್ಡಲಾಗಿದೆ ಎಂಬ ಆರೋಪದ ಟೇಪನ್ನು ಸ್ಪೀಕರ್ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ಸತ್ಯವು ಹೊರಬಿದ್ದಲ್ಲಿ ಮಾತ್ರವೇ ವ್ಯವಸ್ಥೆಯ ವಿಶ್ವಾಸಾರ್ಹತೆ ಸ್ಥಾಪಿಸಲು ಸಾಧ್ಯವಾಗಬಹದು, ತನಿಖೆಯನ್ನು ಆದಷ್ಟು ಶೀಘ್ರದಲ್ಲೇ ನಡೆಸಬೇಕು ಎಂಬುದಾಗಿ ತಾನು ಹೇಳಿರುವುದಾಗಿ ಯೆಚೂರಿ ಸ್ಪಷ್ಟಪಡಿಸಿದ್ದಾರೆ.
ಸ್ಪೀಕರ್ ಕಚೇರಿಯು ಭಾಗಿಯಾಗಿರುವ ಕುರಿತಾಗಿ ತಾನು ಎಲ್ಲಿಯೂ ಉಲ್ಲೇಖ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|