ಅಕ್ರಮ ಆಸ್ತಿ ಹೊಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ಧದ ದೂರಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ ಮೂರರವರೆಗೆ ಮುಂದೂಡಿದೆ.
ಈ ವಿಚಾರಣೆಯು ಜುಲೈ 28ಕ್ಕೆ ನಿಗದಿಯಾಗಿತ್ತು. ಆದರೆ, ಆ ದಿನ ಅನೇಕ ದೂರುಗಳ ವಿಚಾರಣೆ ನಡೆಯಬೇಕಾಗಿರುವುದರಿಂದ ಅಕ್ರಮ ಆಸ್ತಿಯ ಕುರಿತಾಗಿ ಸಿಬಿಐ ಸಲ್ಲಿಸಿರುವ ದೂರನ್ನು ತಿರಸ್ಕರಿಸುವಂತೆ ಮಾಯಾವತಿ ಅವರ ಲಿಖಿತ ದೂರಿನ ವಿಚಾರಣೆಯನ್ನು ನವೆಂಬರ್ ಮೂರರವರೆಗೆ ಮುಂದೂಡಲಾಗಿರುವುದಾಗಿ ಸುಪ್ರೀಂ ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ವಿರುದ್ಧವಿರುವ ದೂರಿನ ಸಿಂಧುತ್ವವನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಲಾಗಿದ್ದ ಲಿಖಿತ ದೂರಿಗೆ ಉತ್ತರವೆಂಬಂತೆ ಸಿಬಿಐ ಮೇಲು ಅಫಿದವಿತ್‌ನ್ನು ಸಲ್ಲಿಸಿತ್ತು.
ಬಿಎಸ್ಪಿಯು ಯುಪಿಎ ಸರಕಾರದಿಂದ ಬೆಂಬಲವನ್ನು ವಾಪಸ್ ಪಡೆದುಕೊಂಡ ನಂತರ ಸಿಬಿಐ ಈ ಅಫಿದವಿತ್‌ನ್ನು ಸಲ್ಲಿಸಿತ್ತು.
|