ಬೆಂಗಳೂರಿನ ಐಟಿ ಕೇಂದ್ರಗಳು ಭಯೋತ್ಪಾದನೆ ವ್ಯಾಪ್ತಿಯಲ್ಲಿ ಬರುತ್ತಿರುವುದರೊಂದಿಗೆ, ಶತಕೋಟಿ ಡಾಲರ್ ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ರಕ್ಷಣೆ ನೀಡುವ ಸಲುವಾಗಿ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ (ಸಿಐಎಸ್ಎಫ್)ಗಳಿಗೆ ಅನುವು ಮಾಡಿಕೊಡುವಂತೆ ಕಾನೂನು ತಿದ್ದುಪಡಿ ಮಾಡಲು ಕೇಂದ್ರವು ಸಿದ್ಧವಿದೆ ಎಂದು ಕೇಂದ್ರವು ತಿಳಿಸಿದೆ.
ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಈ ಹೇಳಿಕೆಯನ್ನು ನೀಡಿದ್ದು, ಐಟಿ ಉದ್ಯಮಗಳಿಗೆ ಸಿಐಎಸ್ಎಫ್ ರಕ್ಷಣೆ ನೀಡುವಂತೆ ಐಟಿ ಉದ್ಯಮಗಳಿಂದ ನಿರಂತರ ಬೇಡಿಕೆ ಬರುತ್ತಿದೆ ಎಂದಿದ್ದಾರೆ.
ಐಟಿ ಬೃಹತ್ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ ಸೇರಿದಂತೆ ಬೆಂಗಳೂರು ನಗರವು ಸುಮಾರು 1500 ವಿದೇಶಿ ಮತ್ತು ದೇಶೀಯ ಐಟಿ ಕಂಪನಿಗಳ ನೆಲೆಯಾಗಿದೆ.
ಖಾಸಗಿ ಕ್ಷೇತ್ರಗಳಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಐಟಿ ಉದ್ಯಮಗಳಿಗೆ ಭದ್ರತೆಯನ್ನು ಒದಗಿಸಲು ಕೇಂದ್ರವು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿಯನ್ನು ಮಾಡಲು ಕೇಂದ್ರವು ಸಿದ್ಧವಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
|