ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರಗಾಮಿಗಳ ಸುರಕ್ಷಿತ ತಾಣ 'ಸಿಲಿಕಾನ್ ಸಿಟಿ'  Search similar articles
PTI
ಪ್ರಪಂಚದ ಗಮನ ಸೆಳೆಯುತ್ತಿರುವ ಸಿಲಿಕಾನ್ ಸಿಟಿ ಸುಮಾರು 60 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು,ಇದೀಗ ಮಾಹಿತಿ ತಂತ್ರಜ್ಞಾನ ನಗರಿ ಉಗ್ರಗಾಮಿಗಳಿಗೆ ಸುರಕ್ಷಿತ ತಾಣವಾಗುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಜನನಿಬಿಡ ಪ್ರದೇಶಗಳನ್ನು ಹೊಂದಿರುವ ಉದ್ಯಾನನಗರಿ ಮೇಲೆ ಉಗ್ರರ ವಕ್ರದೃಷ್ಟಿ ಬಿದ್ದಿದ್ದು, ಆತಂಕವಾದಿಗಳಿಗೆ ಸುರಕ್ಷಿತ ಸ್ಥಳವಾಗಿದೆ ಎಂಬುವುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಘಟನೆಯೇ ಸಾಕ್ಷಿಯಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕವೂ ಸುರಕ್ಷಿತ ತಾಣವಾಗಿ ಉಳಿದಿಲ್ಲ ಎಂದು ಮಾಜಿ ಡಿಜಿಪಿ ಬಿ.ಎಸ್.ಸಿಯಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುರಕ್ಷಿತ ಸ್ಥಳ ಎಂಬುದಾಗಿಯೇ ನಂಬಿದ್ದ ಉದ್ಯಾನನಗರದ ಜನತೆ 2005ರ ಡಿಸೆಂಬರ್ 28ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ (ಐಐಎಸ್‌ಸಿ) ಉಗ್ರರು ಗುಂಡಿನ ದಾಳಿ ನಡೆಸಿದಾಗ ಬೆಚ್ಚಿಬಿದ್ದಿದ್ದರು.

ಈ ಘಟನೆಯಲ್ಲಿ ಪ್ರೊಫೆಸರ್ ಒಬ್ಬರು ಬಲಿಯಾಗಿದ್ದು ನಾಲ್ಕು ಮಂದಿ ಗಾಯಗೊಂಡಿದ್ದರು. ಸಿಲಿಕಾನ್ ಸಿಟಿ ಕೂಡ ಭಯೋತ್ಪಾದಕರ ಗುರಿ ಎಂಬುದನ್ನು ತೋರಿಸಿಕೊಟ್ಟ ಪ್ರಥಮ ಘಟನೆ ಇದಾಗಿತ್ತು.

ಆದರೆ ಪೊಲೀಸ್ ಮೂಲಗಳ ಪ್ರಕಾರ 2005ಕ್ಕಿಂತ ಮುನ್ನ, ಕಳೆದ ಹತ್ತು ವರ್ಷಗಳಿಂದ ಆತಂಕವಾದಿಗಳ ಗುಂಪು ದಾಳಿ ನಡೆಸುವ ಸಂಚು ನಡೆಸುತ್ತಿದ್ದವು ಎಂಬುದಾಗಿ ಹೇಳಿದೆ.

ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಕರ್ನಾಟಕ ಪೊಲೀಸರು 1995 ರಿಂದ 2006ರಲ್ಲಿ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಬೆಂಗಳೂರು ಮೂಲಕ 24ಕ್ಕೂ ಅಧಿಕ ಯುವಕರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿತ್ತು.

2005ರಲ್ಲಿ ಕೆಂಪು ಕೋಟೆ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಲಷ್ಕರ್ ಸಂಘಟನೆಯ ಮೊಹಮ್ಮದ್ ಆರಿಫ್ ಅಶ್ಫಾಕ್ ಎಂಬಾತನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ, ಭಯೋತ್ಪಾದಕ ಸಂಘಟನೆಗಳು ಬೆಂಗಳೂರು ಐಟಿ ದಿಗ್ಗಜರಾದ ಅಜೀಂ ಪ್ರೇಮ್‌ಜಿ ಮತ್ತು ನಾರಾಯಣ ಮೂರ್ತಿಯವರನ್ನು ಗುರಿಯಾಗಿಸಿಕೊಂಡಿವೆ ಎಂಬ ಆಘಾತಕಾರಿ ಅಂಶ ಬಯಲಾಗಿತ್ತು.

ಹೀಗೆ ಸಿಲಿಕಾನ್ ಸಿಟಿ ಆತಂಕವಾದಿಗಳ ಕ್ರೂರದೃಷ್ಟಿಗೆ ಗುರಿಯಾದ ಹಿನ್ನೆಲೆಯಲ್ಲಿ ಒಂದೊಂದು ಅಂಶಗಳು ಬಯಲಾಗತೊಡಗಿದ್ದವು. 2008 ಫೆಬ್ರುವರಿ 22ರಂದು ಸಿಮಿ ಸಂಘಟನೆಯ ಬೆಂಗಳೂರಿನ ಸಾಫ್ಟ್‌‌ವೇರ್ ಇಂಜಿನಿಯರ್ ಯಾಹ್ಯಾ ಕಾಮಕುಟ್ಟಿ ಎಂಬಾತನನ್ನು ಬಂಧಿಸಲಾಗಿತ್ತು.

ಆದರೆ 2007ರ ಹೈದರಾಬಾದ್ ಸ್ಫೋಟ ಕೃತ್ಯದ ಆರೋಪಿ ಸೈಯದ್ ಇಮ್ರಾನ್ ಬಿಲಾಲ್ ಸೆರೆ ಸಿಕ್ಕ ಮೇಲೆ ಮತ್ತಷ್ಟು ಮಾಹಿತಿಗಳು ಪೊಲೀಸ್ ಇಲಾಖೆಗೆ ಲಭ್ಯವಾಗಿದ್ದವು.

ಸ್ಥಳೀಯ ಕನ್ನಡಿಗರ ಮೇಲೆ ಬೆದರಿಕೆಗಳು ಹೆಚ್ಚಾಗಿದ್ದು, ಅಲ್ಲದೇ ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವ ಯುವಕರೇ ಉಗ್ರಗಾಮಿ ಸಂಘಟನೆಯನ್ನು ಸೇರಿಕೊಂಡು ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಇದಕ್ಕೆ ಉದಾರಹಣೆ ಲಂಡನ್ ಗ್ಲಾಸ್ಗೋ ಸ್ಫೋಟದ ರೂವಾರಿ ಸಬೀಲ್ ಅಹ್ಮಮದ್ ಎಂಬುದು ಇಲಾಖೆಯ ಸ್ಪಷ್ಟನುಡಿ.

ದೆಹಲಿ,ಅಹಮ್ಮದಾಬಾದ್, ಕಾಶ್ಮೀರ,ಮುಂಬೈ, ಹೈದರಾಬಾದ್‌‌ಗಳಲ್ಲಿ ಮೆರೆಯುತ್ತಿದ್ದ ಉಗ್ರಗಾಮಿಗಳ ಅಟ್ಟಹಾಸ ಸಿಲಿಕಾನ್ ಸಿಟಿಯಲ್ಲೂ ಅನುರಣಿಸತೊಡಗಿದೆ.
ಮತ್ತಷ್ಟು
ವಿಪ್ ಉಲ್ಲಂಘನೆ: 6 ಎಸ್ಪಿ ಸಂಸದರ ಉಚ್ಚಾಟನೆ
ಐಟಿ ಕ್ಷೇತ್ರಕ್ಕೆ ಸಿಐಎಸ್ಎಫ್ ರಕ್ಷಣೆ: ಪಾಟೀಲ್
ಅಡ್ಡಮತ ಯಾಚಿಸಿ 50 ಸಂಸದರಿಗೆ ಮನವಿ: ಬಿಜೆಪಿ ಬಹಿರಂಗ
ಮಾಯಾವತಿ ಅಕ್ರಮ ಆಸ್ತಿ: ವಿಚಾರಣೆ ನ.3ಕ್ಕೆ
ಸ್ಪೀಕರ್ ಮೇಲೆ ಆರೋಪ ಮಾಡಿಲ್ಲ: ಯೆಚೂರಿ
ಸೇತು ಧ್ವಂಸ ಸಿದ್ಧಾಂತ: ವಿದ್ವಾಂಸರಲ್ಲಿ ಮತಭೇದ