ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟದ ನಡೆದ ಬೆನ್ನಲ್ಲೇ ಅಹ್ಮದಬಾದಿನಲ್ಲಿ ಜನರನ್ನು ಬೆಚ್ಚಿ ಬೀಳಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆಯು 45ಕ್ಕೆ ಏರಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 45 ಜನರ ಸಾವಿನ ಹೊರತಾಗಿ, ಎರಡು ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಸುಮಾರು 60ರಿಂದ 70 ನಿಮಿಷಗಳ ಅಂತರದಲ್ಲಿ ಮಾನಿನನಗರ, ಇಸಾನ್ಪುರ್, ನ್ಯಾರೋಲ್ ಸರ್ಕಲ್, ಬಾಪೂನಗರ್, ಹಟ್ಕೇಶ್ವರ್, ಸಾರಂಗಪುರ್ ಸೇತುವೆ, ಸರ್ಕೇಜ್, ಓದಾವ್, ಸರ್ದಾರ್ ಪಟೇಲ್ ಮಾರ್ಕೆಟ್, ಸಿವಿಲ್ ಆಸ್ಪತ್ರೆ, ಜುಹಾಪುರ್, ಅಂಬುರ್ ಟವರ್ ಕಟ್ಟಡ, ರಾಯ್ಪುರ್ ಮತ್ತು ಗೌರಿಬಾದಿ ಮುಂತಾದ ಸ್ಥಳಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು
ಏತನ್ಮಧ್ಯೆ, ಈ ಸ್ಫೋಟವು ಗುಜರಾತ್ ಹಿಂಸಾಚಾರದ ವಿರುದ್ಧ ಪ್ರತೀಕಾರವಾಗಿದೆ ಎಂದು ಹೇಳುವ ಮೂಲಕ ಇಂಡಿಯನ್ ಮುಜಾಹಿದೀನ್ ಎಂಬ ಸಮೂಹವು ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ.
ಸರಣಿ ಬಾಂಬ್ ಸ್ಫೋಟ ನಡೆಯುವ ಕೆಲವೇ ನಿಮಿಷಗಳ ಮೊದಲು ವಿವಿಧ ಮಾಧ್ಯಮಗಳಿಗೆ ಉಗ್ರಗಾಮಿ ಗುಂಪುಗಳಿಂದ ಕಳುಹಿಸಿದ 14 ಪುಟಗಳ ಇಮೈಲ್‌ನಲ್ಲಿ ಇದು ತಿಳಿಸಿದೆ
|