ಅಹ್ಮದಾಬಾದಿನ ಸರಣಿ ಬಾಂಬ್ ಸ್ಫೋಟವು ಭಾರತದ ವಿರುದ್ಧದ ಯುದ್ಧವಾಗಿದೆ ಎಂಬುದಾಗಿ ಸ್ಫೋಟದ ಬಗ್ಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸ್ಫೋಟಗಳ ಹಿಂದೆ ಪ್ರಬಲ ಉಗ್ರಗಾಮಿ ಸಂಘಟನೆಗಳ ಕೈವಾಡವಿರುವುದ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ದೇಶದ ವೈರಿಗಳು ಮಹಾತ್ಮಗಾಂಧಿಯ ನೆಲದಲ್ಲಿ ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಈ ವಿಚಾರವನ್ನು ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ತಿಳಿಸಲಾಗಿದೆ ಎಂದು ಮೋದಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.
ಏನೇ ಆದರೂ, ಈ ಸ್ಫೋಟಗಳು ಗುಜರಾತನ್ನು ಅಭಿವೃದ್ಧಿ ಪಥದಿಂದ ಹಿಂದಕ್ಕೆ ತಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮೋದಿ, ತನ್ನ ಅಭಿವೃದ್ಧಿ ಯೋಜನಗಳಲ್ಲಿ ಯಶಸ್ವಿ ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಸ್ಫೋಟದಲ್ಲಿ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಮೋದಿ ಘೋಷಿಸಿದ್ದಾರೆ.
|