ಬೆಂಗಳೂರು ಮತ್ತು ಅಹ್ಮದಾಬಾದಿನ ನಡುವೆ ಕೇವಲ ದಿನದ ಅಂತರದಲ್ಲೇ ನಡೆದ ಬಾಂಬ್ ಸ್ಫೋಟಕ್ಕೆ ಪರಸ್ಪರ ಸಾಮ್ಯತೆ ಇದೆ ಎಂಬುದಾಗಿ ಶಂಕಿಸಲಾಗಿದೆ.
ಬೆಂಗಳೂರಿನಲ್ಲಿ ಎಂಟು ಬಾಂಬ್ ಸ್ಫೋಟಗೊಂಡರೆ, ಅಹ್ಮದಾಬಾದಿನಲ್ಲಿ 16 ಬಾಂಬ್ ಸ್ಫೋಟಗೊಂಡಿವೆ.
ಎರಡೂ ನಗರಗಳಲ್ಲಿನ ಬಾಂಬ್ ಸ್ಫೋಟವು ಕಡಿಮೆ ತೀವ್ರತೆಯ ಸ್ಫೋಟವಾಗಿದ್ದು, ಜನನಿಬಿಡ ಪ್ರದೇಶದಲ್ಲೇ ಸ್ಫೋಟವು ಸಂಭವಿಸಿದೆ.
ಇದರೊಂದಿಗೆ ಮುಖ್ಯವಾಗಿ ಎರಡೂ ರಾಜ್ಯಗಳು ಬಿಜೆಪಿ ಸರಕಾರದ ಆಡಳಿತದಲ್ಲಿದ್ದು, ಬಿಜೆಪಿ ಆಡಳಿತವಿರುವ ರಾಜ್ಗಗಳು ಮುಖ್ಯ ಗುರಿಯಾಗಿರುವ ಶಂಕೆಯು ಎಲ್ಲರಲ್ಲಿ ಬೇರೂರಿದ್ದು, ಏನೇ ಆದರೂ, ಈ ಕುರಿತಾಗಿ ಪ್ರತಿಕ್ರಯಿಸಲು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ನಿರಾಕರಿಸಿದ್ದಾರೆ.
ಕೇಂದ್ರವು ಕಠಿಣ ಭಯೋತ್ಪಾದನಾ ವಿರೋಧಿ ನೀತಿಯನ್ನು ಹೊಂದಬೇಕು ಎಂದು ಆಡ್ವಾಣಿ ಒತ್ತಾಯಿಸಿದ್ದಾರೆ.
|