ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹ್ಮದಾಬಾದ್ ಸ್ಫೋಟ: ಪೊಲೀಸರಿಂದ ಫ್ಲಾಟ್ ವಶ  Search similar articles
ಅಹ್ಮದಾಬಾದ್ ಸರಣಿ ಸ್ಫೋಟದ ತನಿಖೆಯ ಭಾಗವೆಂಬಂತೆ, ಮುಂಬಯಿಯ ಪಾಮ್ ಬೀಚ್ ರಸ್ತೆಯಲ್ಲಿರುವ ಗುನಿನಾ ವಸತಿಸಂಕೀರ್ಣವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದು ಅಹ್ಮದಾಬಾದಿನಲ್ಲಿನ ಸರಣಿ ಬಾಂಬ್ ಸ್ಫೋಟದ ನಿಮಿಷಗಳ ಮೊದಲು ಉಗ್ರಗಾಮಿಗಳು ಇಲ್ಲಿಂದಲೇ ಇಮೈಲ್ ಕಳುಹಿಸಿರಬಹುದೆಂದು ಶಂಕಿಸಲಾಗಿದೆ.

ಇಂಡಿಯನ್ ಮುಜಾಬಹಿದ್ದೀನ್ ಎಂಬ ಹೆಸರಿನ ಉಗ್ರಗಾಮಿ ಸಮೂಹವು, ಗುಜರಾತ್ ಹಿಂಸಾಚಾರದ ಪ್ರತೀಕಾರಕ್ಕಾಗಿ ದಾಳಿಯನ್ನು ನಡೆಸಲಾಗಿದ್ದು, ಇದಕ್ಕೆ ತಾನೇ ಹೊಣೆ ಎಂದು ಇಮೈಲ್‌ನಲ್ಲಿ ತಿಳಿಸಿದೆ.

ಈ ಪ್ರದೇಶದಲ್ಲಿ ಕೆಲವು ಸಾಮಾಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆದರೆ, ಯಾರನ್ನೂ ಬಂಧಿಸಿರುವ ಕುರಿತು ವರದಿಯಾಗಿಲ್ಲ.

ಈ ಫ್ಲಾಟ್ ಅಭಿಶೇಕ್ ಶರ್ಮ ಎಂಬವರಿಗೆ ಸೇರಿದ್ದಾಗಿದ್ದು, ಅವರು ಇದನ್ನು ವಿದೇಶಿಯೊಬ್ಬರಿಗೆ ಬಾಡಿಗೆಗೆ ನೀಡಿದ್ದರು. ಅಮೆರಿಕದ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಈ ಫ್ಲಾಟ್‌ನಲ್ಲಿ ವಾಸವಾಗಿದ್ದರು ಎಂಬುದಾಗಿ ಸ್ಥಳೀಯರು ಹೇಳಿದ್ದಾರೆ. ಏನೇ ಆದರೂ, ಈ ಕುರಿತಾಗಿ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಸ್ಥಳೀಯ ಕ್ರೈಮ್ ವಿಭಾಗದ ಅಧಿಕಾರಿಗಳು ಅಮೆರಿಕನ್ ವ್ಯಕ್ತಿಯ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ಉಗ್ರಗಾಮಿ ವಿರೋಧಿ ತಂಡಕ್ಕೆ ನೀಡಿದ್ದಾರೆ.
ಮತ್ತಷ್ಟು
ಬೆಂಗಳೂರು ಅಹ್ಮದಾಬಾದ್ ಸ್ಫೋಟದಲ್ಲಿ ಸಾಮ್ಯತೆ
ದೇಶದ ವಿರುದ್ಧದ ಯುದ್ಧ: ಮೋದಿ
ಅಹ್ಮದಾಬಾದ್ ಸ್ಫೋಟ: 38ಕ್ಕೇರಿದ ಸಾವಿನ ಸಂಖ್ಯೆ
ಅಹಮದಾಬಾದ್‌: 16ಕ್ಕೂ ಹೆಚ್ಚು ಕಡೆ ಬಾಂಬ್ ಸ್ಫೋಟ
ಉಗ್ರಗಾಮಿಗಳ ಸುರಕ್ಷಿತ ತಾಣ 'ಸಿಲಿಕಾನ್ ಸಿಟಿ'
ವಿಪ್ ಉಲ್ಲಂಘನೆ: 6 ಎಸ್ಪಿ ಸಂಸದರ ಉಚ್ಚಾಟನೆ