ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹ್ಮದಾಬಾದ್, ಸೂರತ್‌ನಲ್ಲಿ ಜೀವಂತ ಬಾಂಬ್  Search similar articles
ಅಹ್ಮದಾಬಾದ್ ಮತ್ತು ಸೂರತ್‌ನಲ್ಲಿ ಎರಡು ಜೀವಂತ ಬಾಂಬ್‌ಗಳನ್ನು ಬಾಂಬ್ ನಿಷ್ಕ್ರಿಯ ದಳವು ಪತ್ತೆ ಮಾಡಿದ್ದು, ಈ ಮೂಲಕ ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿರುವ ಅಹ್ಮದಾಬಾದಿನ ಜನತೆಯ ಸ್ಫೋಟದ ಭೀತಿಯು ಇನ್ನೂ ಮುಂದುವರಿಯುವಂತಾಗಿದೆ.

ಮೊದಲ ಜೀವಂತ ಬಾಂಬ್‌ ಅಹ್ಮದಾಬಾದಿನ ಹತ್ಕೇಶ್ವರ ಪ್ರದೇಶದ ಕಸದ ತೊಟ್ಟಿಯಲ್ಲಿ ಕಂಡುಬಂದರೆ, ಎರಡನೇ ಬಾಂಬ್ ಸೂರತ್‌ನ ನೂಪುರ ಆಸ್ಪತ್ರೆಯ ಪಕ್ಕದಲ್ಲಿರುವ ಸಿಟಿಲೈಟ್ ಪ್ರದೇಶದಲ್ಲಿ ಕಂಡುಬಂದಿದೆ.

ಟೈಮರ್ ಸಾಧನದೊಂದಿಗೆ ಅಳವಡಿಸಲಾಗಿದ್ದ ಈ ಎರಡೂ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪ್ರದೇಶವಾದ ಮನಿನಾನಗರದಲ್ಲೂ ಎರಡು ಜೀವಂತ ಬಾಂಬ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮನಿನಾನಗಗರದ ಚಾರ್ ರಾಸ್ತಾದಿಂದ ಗಡಿಯಾರ, ಪೆನ್ಸಿಲ್ ಮತ್ತು ಕೆಲವು ಸ್ಫೋಟಕ ವಸ್ತುಗಳನ್ನು ಅಹ್ಮದಾಬಾದಿನ ತನಿಖಾ ವರದಿ ತಂಡವು ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಈ ಸಾಮಾಗ್ರಿಗಳನ್ನು ತನಿಖಾ ಪರೀಕ್ಷೆಗೆ ಕಳುಹಿಸಲಾಗಿದ್ದು, 16 ಸ್ಫೋಟಗಳಲ್ಲಿ 13ಸೈಕಲ್‍‌‌ನಲ್ಲಿರುವ ಟಿಫಿನ್ ಬಾಕ್ಸ್, ಒಂದನ್ನು ಸಿಎನ್‌ಜಿ ಬಸ್ ಮತ್ತು ಎರಡು ಆಸ್ಪತ್ರೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಸ್ಫೋಟಿಸಲಾಗಿದೆ.

ಸಿವಿಲ್ ಆಸ್ಪತ್ರೆಯ ಹೊರಭಾಗದ ಬಾಂಬನ್ನು ಜಿಜೆ6 ಸಿಡಿ 9178 ನಂಬರಿನ ಮಾರುತಿ 800 ಕಾರಲ್ಲಿ ಇರಿಸಲಾಗಿದ್ದು, ಈ ಕಾರನ್ನು ವಡೋದರಿಂದ ಅಪಹರಿಸಲಾಗಿದೆ ಎಂದು ಶಂಕಿಸಲಾಗಿದೆ.
ಮತ್ತಷ್ಟು
ಅಹ್ಮದಾಬಾದ್ ಸ್ಫೋಟ: ಪೊಲೀಸರಿಂದ ಫ್ಲಾಟ್ ವಶ
ಬೆಂಗಳೂರು ಅಹ್ಮದಾಬಾದ್ ಸ್ಫೋಟದಲ್ಲಿ ಸಾಮ್ಯತೆ
ದೇಶದ ವಿರುದ್ಧದ ಯುದ್ಧ: ಮೋದಿ
ಅಹ್ಮದಾಬಾದ್ ಸ್ಫೋಟ: 45ಕ್ಕೇರಿದ ಸಾವಿನ ಸಂಖ್ಯೆ
ಅಹಮದಾಬಾದ್‌: 16ಕ್ಕೂ ಹೆಚ್ಚು ಕಡೆ ಬಾಂಬ್ ಸ್ಫೋಟ
ಉಗ್ರಗಾಮಿಗಳ ಸುರಕ್ಷಿತ ತಾಣ 'ಸಿಲಿಕಾನ್ ಸಿಟಿ'